ಭಾರತೀಯ ಮೂಲದ ಸಿಖ್‌ ರಾಜಕಾರಣಿ ಗೋಬಿಂದ್‌ ಸಿಂಗ್‌ ದಿಯೋ(45) ಮಲೇಷ್ಯಾ ಸರ್ಕಾರದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿದ್ದಾರೆ.  

ಕೌಲಾಲಂಪುರ: ಭಾರತೀಯ ಮೂಲದ ಸಿಖ್‌ ರಾಜಕಾರಣಿ ಗೋಬಿಂದ್‌ ಸಿಂಗ್‌ ದಿಯೋ(45) ಮಲೇಷ್ಯಾ ಸರ್ಕಾರದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿದ್ದಾರೆ. 

ಈ ಮೂಲಕ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದಿಂದ ಸಚಿವರಾಗಿ ಆಯ್ಕೆಯಾದ ಪ್ರಥಮ ವ್ಯಕ್ತಿ ಎಂಬ ಇತಿಹಾಸಕ್ಕೂ ಮುನ್ನುಡಿ ಬರೆದಿದ್ದಾರೆ. ದಿಯೋ, ಸಂವಹನ ಮತ್ತು ಸಮೂಹ ಮಾಧ್ಯಮ ಸಚಿವರಾಗಿ ಆಯ್ಕೆಯಾಗಿದ್ದಾರೆ. ಭಾರತ ಮೂಲದ ಇನ್ನೂ ಇಬ್ಬರು ಮಲೇಷ್ಯಾದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. 

ದಿಯೋ ಮಲೇಷಿಯಾದ ಪುಚುಂಗ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸೋಮವಾರ ಇಲ್ಲಿನ ನ್ಯಾಷನಲ್‌ ಪ್ಯಾಲೇಸ್‌ನಲ್ಲಿ ನಡೆದ ಸಮಾರಂಭ ದಲ್ಲಿ ಪ್ರಧಾನಿ ಮಹತಿರ್‌ ಮಹಮ್ಮದ್‌ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಮಲೇಷಿಯಾದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಸಿಖ್‌ ಜನಸಂಖ್ಯೆ ಇದೆ.