Asianet Suvarna News Asianet Suvarna News

ಮಲಯಾಳಿ ನಟಿಗೆ ಪ್ರೀತ್ಸೆ ಪ್ರೀತ್ಸೆ ಎಂದು ದುಂಬಾಲು ಬಿದ್ದ ಬೆಂಗಳೂರು ಹುಡುಗ

* ಬೆಂಗಳೂರಿನಲ್ಲಿ ಮಲಯಾಳಿ ನಟಿ ರೆಬಾ ಮೋನಿಕಾಗೆ ಲೈಂಗಿಕ ಕಿರುಕುಳ

* ಫ್ರಾಂಕ್ಲಿನ್ ವಿಸಲ್ ಎಂಬ 28 ವರ್ಷದ ಯುವಕ ಆರೋಪಿ

* ನಟಿ ಎಲ್ಲೇ ಹೋದರೂ ಹಿಂಬಾಲಿಸುತ್ತಿದ್ದ; ಲವ್ ಮಾಡು ಮದುವೆಯಾಗು ಎಂದು ಪೀಡಿಸುತ್ತಿದ್ದ

* ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು; ಆರೋಪಿಗೆ ಜಾಮೀನು

malayalam actress reba monica john faces harassment in bengaluru

ಬೆಂಗಳೂರು(ಅ. 30): ಇತ್ತೀಚೆಗೆ ಸಿನಿಮಾ ನಟಿಯರ ಮೇಲೆ ಲೈಂಗಿಕ ಕಿರುಕುಳ ಹೆಚ್ಚುತ್ತಲೇ ಇದೆ. ಈಗ ಮಲಯಾಳಂ ಹೀರೋಯಿನ್'ಗೆ ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳ ನಡೆದ ಆರೋಪ ಕೇಳಿಬರುತ್ತಿದೆ. ರೆಬಾ ಮೊನಿಕಾ ಜಾನ್ ಎಂಬ ಮಲಯಾಳೀ ನಟಿ , ಫ್ರಾಂಕ್ಲಿನ್ ವಿಸಿಲ್ ಎಂಬುವವನಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಮಡಿವಾಳ ಪೊಲೀಸರು 28 ವರ್ಷದ ಆರೋಪಿ ಫ್ರಾಂಕ್ಲಿನ್'ನನ್ನು ಬಂಧಿಸಿದರಾದರೂ, ಕೋರ್ಟ್'ನಿಂದ ಜಾಮೀನು ಪಡೆದು ಆತ ಹೊರಬಂದಿದ್ದಾನೆ.

ಕಳೆದ ವರ್ಷ "ಜಾಕೋಬಿಂಟೆ ಸ್ವರ್ಗರಾಜ್ಯಂ" ಎಂಬ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ರೆಬಾ ಮೋನಿಯಾ, ಕಳೆದ 13 ವರ್ಷಗಳಿಂದ ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುತ್ತಿದ್ದಾರೆ. ಆರೋಪಿ ಫ್ರಾಂಕ್ಲಿನ್ ವಿಸಿಲ್ ಎಲಕ್ಟ್ರಾನಿಕ್ಸ್ ಸಿಟಿ ಸಮೀಪದಲ್ಲಿ ವಾಸಿಸುತ್ತಿದ್ದು, ಬಸವನಗುಡಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.

ಏನು ಕಿರುಕುಳ?
ನಟಿ ರೆಬಾ ಮೋನಿಕಾ ಪ್ರತೀ ಭಾನುವಾರ ಮಡಿವಾಳದ ಸೇಂಟ್ ಆಂಥೋಣಿ ಚರ್ಚ್'ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿರುತ್ತಾರೆ. ಮೋನಿಕಾಗೆ ನೆನಪಿರುವಂತೆ 2016ರ ಅಕ್ಟೋಬರ್ 1ರಿಂದ, ಅಂದರೆ ಈಗ್ಗೆ 2 ವರ್ಷದ ಹಿಂದಿನಿಂದ ಆರೋಪಿ ಫ್ರಾಂಕ್ಲಿನ್ ಆಕೆಯನ್ನು ಎಡಬಿಡದೆ ಹಿಂಬಾಲಿಸುತ್ತಿರುತ್ತಾನೆ. ಆಕೆಯೊಂದಿಗೆ ಚರ್ಚ್'ಗೆ ಹೋಗುವುದು; ಆಕೆ ವಾಪಸ್ ಮನೆಗೆ ಹೋದರೆ ಅಲ್ಲಿಯವರೆಗೂ ಫಾಲೋ ಮಾಡುತ್ತಿರುತ್ತಾನೆ. ನಟಿ ಈ ವಿಚಾರವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಆದರೆ, ತನ್ನ ಫೋನ್ ನಂಬರ್ ಪಡೆದು ಮೆಸೇಜ್ ಕಳುಹಿಸಲು ಆರಂಭಿಸಿದಾಗ ನಟಿಗೆ ಪ್ರಕರಣದ ಗಂಭೀರತೆ ಅರಿವಾಗುತ್ತದೆ. ತನ್ನನ್ನು ಪ್ರೀತಿಸು, ಮದುವೆಯಾಗು ಎಂದೆಲ್ಲಾ ಆತ ಮೆಸೇಜ್ ಮೂಲಕ ಮೋನಿಕಾರನ್ನು ಪೀಡಿಸುತ್ತಿರುತ್ತಾನೆ. ಕೆಲವೊಮ್ಮೆ ಅಸಭ್ಯ ಸಂದೇಶಗಳನ್ನೂ ಕಳುಹಿಸುತ್ತಿರುತ್ತಾನೆ. ಅಷ್ಟಕ್ಕೇ ನಿಲ್ಲದ ಆತ ನಟಿಯ ಕುಟುಂಬ ಮತ್ತು ವೈಯಕ್ತಿಕ ವಿವರಗಳನ್ನ ಮಾಹಿತಿ ಕಲೆಹಾಕುತ್ತಾನೆ.

ಆಗಂತುಕನ ಅಸಹಜ ವರ್ತನೆಯಿಂದ ಆತಂಕಗೊಳ್ಳುವ ರೆಬಾ ಮೋನಿಕಾ, ಈ ವರ್ಷದ ಮೇ 7ರಂದು ಚರ್ಚ್'ನಲ್ಲಿ ಆರೋಪಿಯನ್ನು ತಡೆದು ನಿಲ್ಲಿಸಿ ತನ್ನನ್ನು ಫಾಲೋ ಮಾಡಬೇಡವೆಂದೂ, ಮೆಸೇಜ್'ಗಳನ್ನ ಕಳುಹಿಸಬೇಡವೆಂದೂ ಎಚ್ಚರಿಕೆ ಕೊಡುತ್ತಾಳೆ. ಇದಾಗಿ 2 ತಿಂಗಳವರೆಗೂ ಸುಮ್ಮನಿರುವ ಆತ ಮತ್ತೆ ಬಾಲಬಿಚ್ಚಲು ಶುರು ಮಾಡುತ್ತಾನೆ.

ಆಗ ನಟಿ ಹಾಗೂ ಆಕೆಯ ಕುಟುಂಬಸ್ಥರು ಮಡಿವಾಳ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾರೆ. ಆರೋಪಿಗೆ ಬುದ್ಧಿ ಮಾತು ಹೇಳಿ ಬಿಟ್ಟುಬಿಡಿ ಎಂದು ರೆಬಾ ಮೋನಿಕಾರ ಪೋಷಕರು ಮನವಿ ಮಾಡಿಕೊಂಡಿದ್ದರಾದರೂ, ಮಡಿವಾಳ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹುಡುಗಿಯರಿಗೆ ಇಷ್ಟವಿಲ್ಲದಿದ್ದರೂ ಹಿಂದೆಬಿದ್ದು ಪೀಡಿಸುವ ಯುವಕರಿಗೆ ಸರಿಯಾದ ಪಾಠ ಸಿಗಬೇಕೆಂದು ಪೊಲೀಸರು ಆರೋಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತಾರೆ. ಇದೀಗ ಕೋರ್ಟ್'ನಿಂದ ಜಾಮೀನು ಪಡೆದಿರುವ ಫ್ರಾಂಕ್ಲಿನ್, ಇನ್ಮುಂದೆ ತಾನು ಇಂಥ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆನ್ನಲಾಗಿದೆ.

ರೆಬಾ ಮೋನಿಕಾ ಜಾನ್ ಸಿನಿಮಾರಂಗಕ್ಕೆ ಬರುವ ಮುನ್ನ 2013ರಲ್ಲಿ ಟಿವಿ ರಿಯಾಲಿಟಿ ಶೋವೊಂದರ ಮೂಲಕ ಕೇರಳದಲ್ಲಿ ಜನಪ್ರಿಯತೆ ಗಳಿಸಿದ್ದಳು. "ಜೇಕಬಿಂಟೇ ಸ್ವರ್ಗರಾಜ್ಯಂ" ಚಿತ್ರದ ಬಳಿಕ ಆಕೆಯ ಖ್ಯಾತಿ ಹೆಚ್ಚಾಗುತ್ತದೆ. ಇದೀಗ ತಮಿಳಿನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Follow Us:
Download App:
  • android
  • ios