ಮಲಯಾಳಂ, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಬಹು ಚಿರಪರಿಚಿತರಾಗಿರುವ ಮೀರಾಗೆ ಯಾಕೋ ತಮ್ಮ ಪತಿ ಅನೀಲ್ ಜಾನ್ ಟಿಟೂಸ್ ಜತೆಗೆ ಜೀವನ ನಡೆಸಲಾರೆ ಎನ್ನುತ್ತಿದ್ದಾರೆ.

ಮಲೈಕಾ ಅರೋರಾ, ಕರೀಷ್ಮಾ ಕಪೂರ್, ಸುಸೇನ್ ಖಾನ್, ಅಮಾಲ ಪೌಲ್... ಪಟ್ಟಿ ಬೆಳೆಯುತ್ತ ಹೋಗುತ್ತದೆ. ಯಾಕೆಂದರೆ ಈ ಪಟ್ಟಿಗೆ ಹೊಸ ಸೇರ್ಪಡೆ ಮೀರಾ ಜಾಸ್ಮೀನ್ ಎನ್ನುತ್ತಿದೆ ಸಿನಿಮಾ ಪರದೆಯ ಪುಟಗಳು. ಇಷ್ಟಕ್ಕೂ ಏನು ಈ ಪಟ್ಟಿ ಅಂತಿರಾ? ನಿನ್ನೆಯೋ, ಮೊನ್ನೆಯೋ ಮದುವೆ ಆದಂತೆ ಕಂಡ ಮೀರಾ ಜಾಸ್ಮೀನ್ ಆಗಲೇ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಮಲಯಾಳಂ, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಬಹು ಚಿರಪರಿಚಿತರಾಗಿರುವ ಮೀರಾಗೆ ಯಾಕೋ ತಮ್ಮ ಪತಿ ಅನೀಲ್ ಜಾನ್ ಟಿಟೂಸ್ ಜತೆಗೆ ಜೀವನ ನಡೆಸಲಾರೆ ಎನ್ನುತ್ತಿದ್ದಾರೆ. ಹೀಗಾಗಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿರುವ ಸುದ್ದಿ ಈಗಷ್ಟೆ ಬಂದಿದೆ. ಹಾಗೆ ನೋಡಿದರೆ ಉದ್ಯಮಿ ಅನೀಲ್ ಜಾನ್ ಟಿಟೂಸ್ ಅವರಿಗೆ ಎರಡನೇ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮೇಲೆ ಮೀರಾ ಜಾಸ್ಮೀನ್ ಕೈ ಹಿಡಿದ ಅನಿಲ್‌ಗೆ ಈಗ ಮೊದಲ ಪತ್ನಿಯ ಕಾಟ ಶುರುವಾಗಿದೆಯಂತೆ. ಇದರಿಂದ ಬೇಸತ್ತ ಮೀರಾ, ಕಾನೂನು ಕಟಕಟೆಗೇರಿದ್ದು, ತನಗೆ ಡಿವೋರ್ಸ್ ಕೊಡಿ ಎನ್ನುತ್ತಿದ್ದಾರಂತೆ. ಆ ಮೂಲಕ ನಾನೊಂದು ತೀರಾ ನೀನೊಂದು ತೀರಾ ಎಂದು ಹಾಡುತ್ತಿರುವ ವಿಚ್ಛೇದಿತ ಸಿನಿಮಾ ದಂಪತಿಗಳ ಸಾಲಿಗೆ ಮೀರಾ ಜಾಸ್ಮಿನ್ ಕೂಡ ಸೇರುತ್ತಾರೆಯೇ? ಎನ್ನುವ ಗುಸುಗುಸು ಕೇಳಿಬರುತ್ತಿದೆ.

Add Asianetnews Kannada as a Preferred SourcegooglePreferred