Asianet Suvarna News Asianet Suvarna News

ಕೇಂದ್ರ ಸರ್ಕಾರದಿಂದ 'ಸಂಪದ' ನೂತನ ಆಹಾರ ಸಂಸ್ಕರಣ ಯೋಜನೆ ಘೋಷಣೆ

 ಕೇಂದ್ರ ಸರ್ಕಾರವು ‘ಸಂಪದ’ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಯನ್ನು ಘೋಷಿಸಿದ್ದು ಅದಕ್ಕೆ 6 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜೊತೆಗೆ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.

Make way not for 2nd green revolution but for evergreen revolution says PM Narendra Modi

ನವದೆಹಲಿ (ಮೇ.26):ಕೇಂದ್ರ ಸರ್ಕಾರವು ‘ಸಂಪದ’ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಯನ್ನು ಘೋಷಿಸಿದ್ದು ಅದಕ್ಕೆ 6 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜೊತೆಗೆ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಕೃಷಿ ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ಮಾಡಿ, ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, North-East (ಈಶಾನ್ಯ) ಗೆ ಹೊಸ ವ್ಯಾಖ್ಯಾನವನ್ನು ನೀಡಿದರು.

NE ಎಂದರೆ North East ಒಂದೇ ಅಲ್ಲ, New Economy, New Energy, New Empowerment, New Engine ಎಂದರ್ಥ. ಇದು ನಮ್ಮ ಸರ್ಕಾರದ ಕನಸಾದ ಹೊಸ ಭಾರತವನ್ನು ಹುಟ್ಟು ಹಾಕಲಿದೆ ಎಂದು ಈಶಾನ್ಯ ರಾಜ್ಯದ ಜನತೆಗೆ ಹೊಸ ಹುರುಪನ್ನು ತುಂಬಿದರು.

ಕೃಷಿ ಸಂಶೋಧನಾ ಸಂಸ್ಥೆ ಅಸ್ಸಾಂಗೆ ವರದಾನವಾಗಿದೆ.  ಸಾವಯವ ಕೃಷಿ ಮಾಡಲು ನಮ್ಮ ದೇಶಕ್ಕೆ ಅಪಾರ ಸಾಮರ್ಥ್ಯವಿದೆ. ಅದರಲ್ಲೂ ಈಶಾನ್ಯ ಭಾರತಕ್ಕೆ ಇನ್ನೂ ಹೆಚ್ಚಿನ ಸಾಮರ್ಥ್ಯವಿದೆ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ‘ಸಂಪದ’ ಘೋಷಿಸಿದರು. ಈ ಯೋಜನೆ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆಯನ್ನು ನೀಡಲಿದೆ.

Follow Us:
Download App:
  • android
  • ios