ಅಲಹಾಬಾದ್‌(ಸೆ.21): ಉತ್ತಮವಾಗಿ ಹೇಗೆ ದೇಶವನ್ನು ಆಳಬೇಕು ಎಂಬುದರ ಬಗ್ಗೆ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ಹೇಳಿದ್ದಾರೆ.

ಅಲಹಾಬಾದ್‌ನಲ್ಲಿ ಮಾತನಾಡಿದ ಅವರು ಪ್ರಧಾನಿ ಹುದ್ದೆಗೆ ತಾನೇ ಸೂಕ್ತ ಅಭ್ಯರ್ಥಿ. ಆಡಳಿತದ ಬಗ್ಗೆ ತಾವು ಇತರರಿಗೆ ಹೇಳಿಕೊಡುವುದಾಗಿ ಖಾನ್‌ ತಿಳಿಸಿದ್ದಾರೆ.

ಭಯೋತ್ಪಾದನೆ ಭಾರತಕ್ಕೆ ಸಮಸ್ಯೆಯಾಗಿದೆ. ಅದನ್ನು ಯಾವ ರೀತಿ ಪರಿಹರಿಸಬಹುದು ಎಂದು ಪತ್ರಕರ್ತರು ಕೇಳಿದಾಗ ‘‘ನಾನು ಆಗಾಗ ಕೊಡುವ ಸಲಹೆಯನ್ನು ಯಾರೂ ಕೂಡ ಪಾಲಿಸುವುದಿಲ್ಲ. ಅದಕ್ಕಾಗಿ ನನ್ನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುತ್ತೇನೆ,’’ ಎಂದು ಹೇಳಿದ್ದಾರೆ. ‘‘ನನ್ನನ್ನು ಆ ಹುದ್ದೆಗೆ ಏರಿಸಿದರೆ ಕಾಶ್ಮೀರ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವೆ. ಜತೆಗೆ ಅಖಂಡ ಭಾರತವನ್ನೂ ನಿರ್ಮಾಣ ಮಾಡುವೆ,’’ ಎಂದಿದ್ದಾರೆ. ‘‘ನಾನು ವಿದ್ಯಾವಂತ, ಅನುಭವಿ, ಪ್ರಾಮಾಣಿಕ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ನುರಿತ ವ. ಮುಸ್ಲಿಂ ಸಮುದಾಯಕ್ಕೆ ಸೇರಿದವನೆಂಬುದೇ ಸಮಸ್ಯೆ,’’ಎಂದು ಅಜಂಖಾನ್‌ ಹೇಳಿಕೊಂಡರು.