ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಹಂತಕರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನ ಕಲೆ ಹಾಕಿದ್ದಾರೆ.

ಬೆಂಗಳೂರು(ಸೆ.13): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಹಂತಕರ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನ ಕಲೆ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೆಪ್ಟೆಂಬರ್ ಐದರಂದು ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿದ್ದ ಹಂತಕರ ಬಗ್ಗೆ ತನಿಖಾ ತಂಡಕ್ಕೆ ಮಹತ್ವದ ಮಾಹಿತಿಯೊಂದು ದೊರೆತಿದೆ. ಕೊಲೆಯಾದ ದಿನವೇ, ಹಂತಕ ಮೂರು ಬಾರಿ ಗೌರಿ ನಿವಾಸಕ್ಕೆ ಬಂದಿದ್ದು ಖಚಿತವಾಗಿದೆ. ಮಧ್ಯಾಹ್ನ, ಮೂರು ಗಂಟೆಗೆ , ಸಂಜೆ ಏಳು ಗಂಟೆ 15 ನಿಮಿಷಕ್ಕೆ ಎರಡು ಬಾರಿ ಆಗಮಿಸುವ ಹಂತಕನೊಬ್ಬ ಅದೇ ದಿನ ರಾತ್ರಿ 8 ಗಂಟೆ ಹತ್ತು ನಿಮಿಷಕ್ಕೆ ಗೌರಿ ಅವರ ಮೇಲೆ ದಾಳಿ ನಡೆಸಿ ಮತ್ತೊಬ್ಬನ ಜೊತೆ ಪರಾರಿಗುತ್ತಾನೆ. ಈ ಮೂಲಕ ಹಂತಕ ಹೊಂಚು ಹಾಕಿ, ಗೌರಿ ಮೇಲೆ ದಾಳಿ ನಡೆಸಿರುವುದು ಎಸ್​ಐಟಿ ತನಿಖೆಯಲ್ಲಿ ಬಯಲಾಗಿದೆ.