ಕೈಗಾರಿಕಾ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವರ ನಿವೃತ್ತಿ ವಯೋಮಿತಿಯನ್ನ ಹೆಚ್ಚಿಸಿದೆ. ಇನ್ನು ಹತ್ತು ವರ್ಷಗಳಿಂದ ನಗರದಲ್ಲೇ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಳ್ಳಿಕಡೆ ಮುಖ ಮಾಡವ ಅನಿವಾರ್ಯತೆ ಎದುರಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ವಿದ್ಯಾರ್ಥಿನಿಯರಿಗೆ ಮತ್ತೆ ಸೈಕಲ್ ಏರುವ ಭಾಗ್ಯವನ್ನ ರಾಜ್ಯ ಸರ್ಕಾರ ನೀಡಿದೆ. ಅಂತೆಯೆ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಬೆಂಗಳೂರು(ಮಾ.25): ಕೈಗಾರಿಕಾ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅವರ ನಿವೃತ್ತಿ ವಯೋಮಿತಿಯನ್ನ ಹೆಚ್ಚಿಸಿದೆ. ಇನ್ನು ಹತ್ತು ವರ್ಷಗಳಿಂದ ನಗರದಲ್ಲೇ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಳ್ಳಿಕಡೆ ಮುಖ ಮಾಡವ ಅನಿವಾರ್ಯತೆ ಎದುರಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ವಿದ್ಯಾರ್ಥಿನಿಯರಿಗೆ ಮತ್ತೆ ಸೈಕಲ್ ಏರುವ ಭಾಗ್ಯವನ್ನ ರಾಜ್ಯ ಸರ್ಕಾರ ನೀಡಿದೆ. ಅಂತೆಯೆ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಸಿ.ಎಂ ಸಿದ್ದರಾಮಯ್ಯ ನೇತೃದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕಾ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಳ, ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಹತ್ತು ವರ್ಷ ನಗರದಲ್ಲೇ ಕೆಲಸ ನಿವರ್ವಹಿಸಿದ ಶಿಕ್ಷಕರರಿಗೆ ವರ್ಗಾವಣೆ ಸೇರಿದಂತೆ ಖಾಸಗಿ ಶಾಲೆಗಳ ಮೇಲೆ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆ ತಿರ್ಮಾನಿಸಿದೆ.

ಸಂಪುಟ ಸಭೆಯ ಪ್ರಮುಖ ನಿರ್ಧಾರ

ಸತತ ಹತ್ತು ವರ್ಷಗಳಿಂದ ನಗರದಲ್ಲೇ ಕೆಲಸ ಮಾಡುತ್ತಿರುವ ಶಿಕ್ಷಕರಗಿಗೆ ವರ್ಗಾವಣೆ ಕಡ್ಡಾಯ ಮಾಡಲಾಗಿದೆ. ಜೊತೆಗೆ ಪತಿ ಪತ್ನಿ ವರ್ಗಾವಣೆಗೆ ಸಂಪುಟ ಸಭೆ ಹೆಚ್ಚಿನ ಆದ್ಯತೆ ನೀಡಿ, ಕಾನೂನು ತರಲು ತಿರ್ಮಾನಿಸಿದೆ. ಇನ್ನು ಕೈಗಾರಿಕಾ ಉದ್ಯೋಗಿಗಳಿಗಳ ನಿವೃತ್ತಿ ವಯಸ್ಸನ್ನ 58 ರಿಂದ 60 ವರ್ಷಕ್ಕೆ ಹೆಚ್ಚಿಸುವ ಮೂಲಕ ಕೈಗಾರಿಕಾ ಉದ್ಯೋಗಿಗಳ ನಿಯಮಾವಳಿ ಬದಲಿಸಿದ್ದಾರೆ. ಇದು ಖಾಸಗಿ ಮಳಿಗೆ, ಸಂಸ್ಥೆ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಇದ್ರಿಂದ 14 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

2017 -18 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲು ಸಂಪುಟ ತಿರ್ಮಾನಿಸಿದೆ. ಇದ್ದಾಕ್ಕಾಗಿ 156 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ 8 ನೇ ತರಗತಿ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ 172 ಕೋಟಿ ವೆಚ್ಚಕ್ಕೆ ಅನುಮೋದನೆ ದೊರೆತಿದೆ. ಇದ್ರಿಂದ 5.7 ಲಕ್ಷ ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲಿದ್ದಾರೆ.

ಮುಖ್ಯವಾಗಿ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಕಾನೂನುಗಳಿಗೆ ತಿದ್ದುಪಡಿ ತರಲು ಸಂಪುಟ ತಿರ್ಮಾನಿಸಿದೆ. ಸಮಾನತೆ, ಸಾರ್ವಜನಿಕ ಹೊಣೆಗಾರಿಕೆ, ಶುಲ್ಕ ನಿಯಂತ್ರಣ, ಮಕ್ಕಳ ಜವಬ್ದಾರಿ ಕುರಿತು ಕೆಲವು ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಇದರಲ್ಲಿ ರಾಜ್ಯದ ಜೊತೆ ಸಿ.ಬಿ ಎಸ್ ಸಿ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೂ ಇದೇ ಕಾನೂನು ಅನ್ವಯವಾಗಲಿದ್ದು , ಪ್ರಸಕ್ತ ಅಧಿವೇಶನದಲ್ಲೇ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ.

ಇನ್ನು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9450 ಅರೇವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲು ಸಂಪುಟ ತಿರ್ಮಾನಿಸಿದೆ.

ವರದಿ: ರವಿ ಶಿವರಾಮ್, ಸುವರ್ಣ ನ್ಯೂಸ್