ಚೆನ್ನೈ ಮೆಟ್ರೋ ರೈಲಿನ ಮಾರ್ಗಕ್ಕಾಗಿ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು,  ಸುಮಾರು 1.30 ಗಂಟೆ ಹೊತ್ತಿನಲ್ಲಿ ಥೌಸಂಡ್ ಲೈಟ್ಸ್ ಮಸೀದಿ ಬಳಿ ಭೂಮಿಯು ಬಿರುಕು ಬಿಟ್ಟಿದೆ. ಬಸ್ಸಿನಲ್ಲಿದ್ದ 35 ಪ್ರಯಾಣಿಕರನ್ನು ಕೂಡಲೇ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಚೆನ್ನೈ (ಏ. 09): ಚೆನ್ನೈನ ಅಣ್ಣಾ ಸಲೈಯಲ್ಲಿ ಭೂಮಿಯು ಏಕಾಏಕಿ ಬಿರುಕು ಬಿಟ್ಟಿದ್ದು, ಒಂದು ಬಸ್ ಹಾಗೂ ಕಾರ್ ಅದರೊಳಗೆ ಬಿದ್ದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಚೆನ್ನೈ ಮೆಟ್ರೋ ರೈಲಿನ ಮಾರ್ಗಕ್ಕಾಗಿ ಸುರಂಗ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸುಮಾರು 1.30 ಗಂಟೆ ಹೊತ್ತಿನಲ್ಲಿ ಥೌಸಂಡ್ ಲೈಟ್ಸ್ ಮಸೀದಿ ಬಳಿ ಭೂಮಿಯು ಬಿರುಕು ಬಿಟ್ಟಿದೆ. ಬಸ್ಸಿನಲ್ಲಿದ್ದ 35 ಪ್ರಯಾಣಿಕರನ್ನು ಕೂಡಲೇ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರು ಹಾಗೂ ಬಸ್ಸನ್ನು ಕ್ರೇನ್ ಸಹಾಯದಿಂದ ಮೇಲೆತ್ತಿದ್ದಾರೆ.

ಬಹಳ ದಿವಸಗಳಿಂದ ಪ್ರದೇಶದಲ್ಲಿ ಮೆಟ್ರೋ ರೈಲಿಗಾಗಿ ಸುರಂಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದು ವಾರದ ಮುಂಚೆ ಅಲ್ಲೇ ಪಕ್ಕದಲ್ಲಿ ನೊರೆ ಸೋರಿಕೆಯುಂಟಾಗಿತ್ತು ಎಂದು ಹೇಳಲಾಗಿದೆ.

(ಚಿತ್ರಕೃಪೆ: ಏಐಆರ್)