ಈ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು(ನ.15): ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್‌ಗೌಡ ವಿರುದ್ಧ ನಟಿ ಮೈತ್ರೇಯಾ ಗೌಡ ಅವರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಾರ್ತಿಕ್‌ಗೌಡ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಮೈತ್ರೇಯಾ ಗೌಡ ಇದೀಗ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅತ್ಯಾಚಾರ ಆರೋಪವನ್ನೇ ಕೈಬಿಟ್ಟಿದ್ದಾರೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಕಾರ್ತಿಕ್‌ಗೌಡ ನಮ್ಮೊಂದಿಗೆ ಸಂಪರ್ಕ ಹೊಂದಿದ್ದು, ಅವರ ಪೋಷಕರಿಗೆ ಗೊತ್ತಿತ್ತು. ಆದರೂ, ಅವರ ಪೋಷಕರು ಬೇರೆ ಯುವತಿಯೊಂದಿಗೆ ಮಗನ ವಿವಾಹ ಏರ್ಪಡಿಸಿದ್ದರು. ಹಾಗಾಗಿ ಪ್ರಕರಣದಲ್ಲಿ ಕಾರ್ತಿಕ್‌ಗೌಡ ತಂದೆ ಡಿ.ವಿ. ಸದಾನಂದಗೌಡ ಹಾಗೂ ತಾಯಿ ಡಾಟಿ ಅವರನ್ನು ಆರೋಪಿಗಳನ್ನಾಗಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.