Asianet Suvarna News Asianet Suvarna News

ಈ ಐವರ ಮೇಲೆ ನಿಂತಿದೆ ನಟ ಅರ್ಜುನ್ ಸರ್ಜಾ ಹಣೆಬರಹ..!

ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶ್ರುತಿ ಹರಿಹರನ್ ​ಹಾಗೂ ಅರ್ಜುನ್​ ಸರ್ಜಾ ಮಧ್ಯೆ ದೂರಿನ ವಾರ್​ ನಡೆತೀದೆ. ಶೃತಿ ಹರಿಹರನ್ ಪ್ರಕರಣದಲ್ಲಿ ಐವರು ಸಾಕ್ಷಿಗಳೇ ಈಗ ನಿರ್ಣಾಯಕವಾಗಲಿದೆ. ಹಾಗಾದ್ರೆ ಆ ಐವರು ಸಾಕ್ಷಿಗಳ್ಯಾರು? 

Main five evidence for Sruthi hariharan FIR against actor Arjun Sarja
Author
Bengaluru, First Published Oct 27, 2018, 7:25 PM IST
  • Facebook
  • Twitter
  • Whatsapp

ಬೆಂಗಳೂರು, [ಅ.27]: ಮೀಟೂ ಅಭಿಯಾನದಡಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್,​ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನಡೆದ ಲೈಂಗಿಕ ದೌರ್ಜನ್ಯ ವಿರುದ್ಧ ಶ್ರುತಿ ಹರಿಹರನ್ ಇಂದು [ಶನಿವಾರ] ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐವರನ್ನು ಸಾಕ್ಷಿ ನೀಡಿದ್ದಾರೆ. 

UB ಸಿಟಿಯಲ್ಲಿ ಅರ್ಜುನ್ ಸರ್ಜಾ ಮಾಡಿದ್ದೇನು? ಎಳೆ-ಎಳೆಯಾಗಿ ಬಿಚ್ಚಿಟ್ಟ ಶ್ರುತಿ

ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಗೆ 5 ಮಂದಿಯನ್ನು ಸಾಕ್ಷಿಯನ್ನಾಗಿ ಮಾಡಿದ್ದು, ವಿಸ್ಮಯ ಚಿತ್ರದ ಶೂಟಿಂಗ್ ಸೆಟ್‍ನಲ್ಲಿದ್ದ 5 ಮಂದಿ ಮತ್ತು ಶೃತಿ ಹರಿಹರನ್ ನೀಡುವ ಹೇಳಿಕೆಯ ಮೇಲೆ ನಟ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ.

 ಆ ಐವರು ಸಾಕ್ಷಿಗಳು ಯಾರು-ಯಾರು?
ನಟಿ ಶೃತಿ ಹರಿಹರನ್ ಪ್ರಕರಣದ ಮೊದಲನೇ ಸಾಕ್ಷಿ ಬೋರೇಗೌಡ. ಶೃತಿ ಹರಿಹರನ್ ಪ್ರಕರಣದ ಎರಡನೇ ಸಾಕ್ಷಿಯಾಗಿರುವುದು ಕಿರಣ್. ಬೋರೇಗೌಡ ಮತ್ತು ಕಿರಣ್ ಇಬ್ಬರೂ ನಟಿ ಶೃತಿ ಹರಿಹರನ್ ಸ್ಟಾಫ್ಸ್ ಆಗಿದ್ದಾರೆ. ಮಾಹಿತಿ ಪ್ರಕಾರ ಶೃತಿ ಹರಿಹರನ್ ಗೆ ಕಿರಣ್ ಮೇಕ್ ಅಪ್ ಮ್ಯಾನ್ ಎಂದು ಹೇಳಲಾಗುತ್ತಿದೆ.

ಶೃತಿ ಹರಿಹರನ್ ಪ್ರಕರಣದ ಮೂರನೇ ಸಾಕ್ಷಿ ಭರತ್ ನೀಲಕಂಠ. ಇವರು ವಿಸ್ಮಯ ಸಿನಿಮಾಗೆ ಸಹ ನಿರ್ದೇಶಕರಾಗಿದ್ದಾರೆ. ಇನ್ನು ವಿಸ್ಮಯ ಸಿನಿಮಾದ ಸಹ ನಿರ್ದೇಶಕರಾಗಿರುವ ಮಿಸ್ ಮೋನಿಕಾ ಶೃತಿ ಹರಿಹರನ್ ಪ್ರಕರಣದ ನಾಲ್ಕನೇ ಸಾಕ್ಷಿ ಆಗಿದ್ದಾರೆ.

ಪ್ರಕರಣದಲ್ಲಿ ಪ್ರಬಲ ಮತ್ತು  ಐದನೇ ಸಾಕ್ಷಿ  ಶೃತಿ ಹರಿಹರನ್ ಸ್ನೇಹಿತೆ ಯಶಸ್ವಿನಿ. ಐವರೂ ಸಾಕ್ಷಿಗಳ ಹೇಳಿಕೆ ಆಧಾರದಲ್ಲಿ ಪ್ರಕರಣಕ್ಕೆ  ಟ್ವಿಸ್ಟ್  ಸಿಗುವ ಸಾಧ್ಯತೆಗಳಿವೆ. ಆದರೆ, ಆರೋಪ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳನ್ನು ಸಲ್ಲಿಸಿಲ್ಲ.

Follow Us:
Download App:
  • android
  • ios