Asianet Suvarna News Asianet Suvarna News

ಮಹಾರಾಷ್ಟ್ರದ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಲು ಗ್ರಾಮಸ್ಥರಿಂದ ಸಿಎಂಗೆ ಮನವಿ

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಗಡಿಂಗ್ಲಾಜ್ ತಾಲೂಕಿನ ನಿಲಜಿ ಗ್ರಾಮದಲ್ಲಿರುವ ಜನರು ನಮಗೆ ಮಹಾರಾಷ್ಟ್ರದಿಂದ ಕೈ ಬಿಟ್ಟು ಚಿಕ್ಕ ರಾಜ್ಯವಾದ ಕರ್ನಾಟಕಕ್ಕೆ ಸೇರಿಸಿ ಎಂದು ಮಹರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಗೆ ಪತ್ರ ಬರೆದಿದ್ದಾರೆ.

Maharastra Village People Wright Letter To CM

ಮುಂಬೈ  : ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಗಡಿಂಗ್ಲಾಜ್ ತಾಲೂಕಿನ ನಿಲಜಿ ಗ್ರಾಮದಲ್ಲಿರುವ ಜನರು ನಮಗೆ ಮಹಾರಾಷ್ಟ್ರದಿಂದ ಕೈ ಬಿಟ್ಟು ಚಿಕ್ಕ ರಾಜ್ಯವಾದ ಕರ್ನಾಟಕಕ್ಕೆ ಸೇರಿಸಿ ಎಂದು ಮಹರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಗೆ ಪತ್ರ ಬರೆದಿದ್ದಾರೆ.

ಹುಕ್ಕೆರಿ ತಾಲೂಕಿನ ಸಂಕೇಶ್ವರ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ‌ ಗಡಿ ಗ್ರಾಮ ಇದಾಗಿದ್ದು, ಒಂದೆಡೆ ಎಮ್ ಇ ಎಸ್ ನವರು ಬೆಳಗಾವಿಯನ್ನ ಮಹರಾಷ್ಟ್ರಕ್ಕೆ ಸೇರಿಸಿಕ್ಕೊಳ್ಳಬೇಕು ಎಂದು ಪದೆ ಪದೆ ಖ್ಯಾತೆ ತೆಗೆಯುತ್ತಿದ್ದರೆ, ಮತ್ತೊಂದಡೆ ಅವರದ್ದೆ ರಾಜ್ಯದ ಗ್ರಾಮವೊಂದ ನಮ್ಮ ಗ್ರಾಮ ಅಭಿವೃದ್ದಿ ದೃಷ್ಠಿಯಿಂದ ನಮ್ಮ ಗಡಿಂಗ್ಲಾಜ್ ತಾಲೂಕು ಶೂನ್ಯವಾಗಿದ್ದು, ರೈತರಿಗೆ ರಾಜ್ಯದಲ್ಲಿ ಮೂಲಶೌಕರ್ಯ ಜೊತೆಗೆ ಕೃಷಿ ಸಾಲದ ವಿಚಾರದಲ್ಲಿ ರೈತರನ್ನು ಕಡೆಗಣಿಸಿದೆ.

ಕರ್ನಾಟಕ ರೈತರ ಸಾಲಮನ್ನಾ ಮಾಡಿದೆ, ಕಡಿಮೆ ದರದಲ್ಲಿ ಬಡ್ಡಿಸಾಲ ನಿಡುತ್ತದೆ,  ಆದರೆ ಮಹರಾಷ್ಟ್ರ ಸರಕಾರವೂ ನಮಗೆ ಎಲ್ಲ ವಿಚಾರದಲ್ಲಿ ಕಡೆಗಣಿಸಿದೆ. ಕೇವಲ ಚುಣಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ ಎಂದು ಗ್ರಾಮಸ್ಥರು ಪಂಚಾಯತಿಯಲ್ಲಿ ಸಭೆ ನಡೆಸಿ ಕರ್ನಾಟಕ್ಕೆ ಬರಲು ತಿರ್ಮಾನ ಮಾಡಿದ್ದಾರೆ.

 ಅಭಿವೃದ್ಧಿ ಕೈಗೊಳ್ಳಿ  ಇಲ್ಲವಾದಲ್ಲಿ ನಮ್ಮನ್ನ ಕರ್ನಾಟಕ ರಾಜ್ಯಕ್ಕೆ ಸೇರಿಸಿಬಿಡಿ ಎಂದು ಮಹಾರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

 

Follow Us:
Download App:
  • android
  • ios