ಅಪಘಾತದಲ್ಲಿ ಗಾಯಗೊಂಡ ತರುಣಿಯ ಹಣ ಕದ್ದ ಮಹಿಳಾ ಪೊಲೀಸ್

First Published 3, Feb 2018, 10:09 AM IST
Maharashtra woman cop Steals Rs 50k from Accident victim
Highlights

ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಪೊಲೀಸ್ ವೊಬ್ಬರು 50,000 ರು. ದೋಚಿದ ಘಟನೆ ತೆಲಂಗಾಣದ ದಭಾಡೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಪುಣೆ: ಅಪಘಾತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಪೊಲೀಸ್ ವೊಬ್ಬರು 50,000 ರು. ದೋಚಿದ ಘಟನೆ ತೆಲಂಗಾಣದ ದಭಾಡೆ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಬೆಂಗಳೂರಿನ ಎಂಬಿಎ ವಿದ್ಯಾರ್ಥಿ ಪ್ರಣಿತಾ ನಂದಕಿಶೋರ್ ಮತ್ತವರ ತಂದೆ ಮೋಟಾರ್ ಸೈಕಲ್‌ನಲ್ಲಿ ಎಟಿಎಂನಿಂದ 50,000 ಹಣ ತೆಗೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಅಪಘಾತ ನಡೆದಿದೆ.

ಈ ವೇಳೆ ಪೊಲೀಸ್ ಪೇದೆ ಸ್ವಾತಿ ಜಾದವ್, ಸಂತ್ರಸ್ತರನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ಹಣದ ಬ್ಯಾಗ್ ಲೂಟಿ ಮಾಡಿದ್ದ ಪೇದೆ, ಬಳಿಕ ಆ ಬ್ಯಾಗ್ ವಿಚಾರವೇ ತನಗೆ ಗೊತ್ತಿಲ್ಲವೆಂಬಂತೆ ನಟಿಸಿದ್ದರು.

loader