Asianet Suvarna News Asianet Suvarna News

ಮೈತ್ರಿ ಮಾಡಿಕೊಂಡು ಮತ್ತೆ ಚುನಾವಣೆ ಎದುರಿಸುತ್ತಾ ಬಿಜೆಪಿ..?

ಕಳೆದ ಚುನಾವಣೆ ವೇಳೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿಕೊಂಡಿದ್ದ ಶಿವ ಸೇನಾ ಹಾಗೂ ಬಿಜೆಪಿ ಇದೀಗ ಮತ್ತೊಮ್ಮೆ ಒಂದಾಗಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಒಂದು ವೇಳೆ ಮೈತ್ರಿಯಾಗಿ ಚುನಾವಣೆ ಎದುರಿಸುವುದಾದಲ್ಲಿ ಅಧಿಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಸೇನಾ ಹೊಂದಿದೆ. 

Maharashtra poll tie-up: Uddhav Thackeray seeks to fight 152 seats, wants Sena CM

ಮುಂಬೈ : ಕಳೆದ ಚುನಾವಣೆ ವೇಳೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿಕೊಂಡಿದ್ದ ಶಿವ ಸೇನಾ ಹಾಗೂ ಬಿಜೆಪಿ ಇದೀಗ ಮತ್ತೊಮ್ಮೆ ಒಂದಾಗಿ ಚುನಾವಣೆ ಎದುರಿಸುವ ಸಾಧ್ಯತೆ ಇದೆ. 

ಆದರೆ ಬಿಜೆಪಿಯೊಂದಿಗೆ ಒಂದಾಗಿ ಚುನಾವಣೆ ಎದುರಿಸುವುದಾದಲ್ಲಿ ಮಹಾರಾಷ್ಟ್ರದ  288 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ಹೊಂದಿದೆ. ಆಗ ಬಿಜೆಪಿಗೆ  ಕೇವಲ136 ಕ್ಷೇತ್ರಗಳು ಉಳಿಯಲಿವೆ. 

ಅಲ್ಲದೇ ಮುಖ್ಯಮಂತ್ರಿ ಸ್ಥಾನವನ್ನೂ ಕೂಡ ಶಿವ ಸೇನೆಯೇ ಬಯಸುತ್ತಿದೆ. ಚುನಾವಣಾ ಪೂರ್ವ  ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಅಧಿಕ ಸ್ಥಾನಗಳನ್ನು ಶಿವ ಸೇನೆಗೆ ಬಿಟ್ಟುಕೊಟ್ಟಲ್ಲಿ ಬಿಜೆಪಿ 2 ನೇ ಸ್ಥಾನದಲ್ಲಿ ಉಳಿಯಲಿದೆ. 

ಇನ್ನು ಎನ್ ಡಿಎ ಮೈತ್ರಿಕೂಟದಿಂದ ಹೊರಗೆ ಬಂದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಶಿವ ಸೇನಾ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ ಮಾರನೇ ದಿನವೇ  ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದರು.

Follow Us:
Download App:
  • android
  • ios