ವಶಪಡಿಸಿಕೊಳ್ಳಲಾದ ಮಾಂಸವು ಗೋವಿನದ್ದೋ ಅಲ್ಲವೋ ಎಂಬುವುದನ್ನು ಖಚಿತಪಡಿಸಲು ಮಹಾರಾಷ್ಟ್ರದ ವಿಧಿವಿಜ್ಞಾನ ಪ್ರಯೋಗಾಲಯವು ಮಹಾರಾಷ್ಟ್ರ ಪೊಲೀಸರಿಗೆ ಗೋಮಾಂಸ ಪತ್ತೆಹಚ್ಚುವ ಕಿಟ್ಟನ್ನು ಒದಗಿಸಲು ಮುಂದಾಗಿದೆ.
ಮುಂಬೈ (ಜು. 09): ವಶಪಡಿಸಿಕೊಳ್ಳಲಾದ ಮಾಂಸವು ಗೋವಿನದ್ದೋ ಅಲ್ಲವೋ ಎಂಬುವುದನ್ನು ಖಚಿತಪಡಿಸಲು ಮಹಾರಾಷ್ಟ್ರದ ವಿಧಿವಿಜ್ಞಾನ ಪ್ರಯೋಗಾಲಯವು ಮಹಾರಾಷ್ಟ್ರ ಪೊಲೀಸರಿಗೆ ಗೋಮಾಂಸ ಪತ್ತೆಹಚ್ಚುವ ಕಿಟ್ಟನ್ನು ಒದಗಿಸಲು ಮುಂದಾಗಿದೆ.
ಈ ಕಿಟ್’ನ್ನು ಬಳಸಿ ಕೇವಲ 30 ನಿಮಿಷದೊಳಗೆ ಮಾಂಸವು ಗೋವಿನದ್ದೋ ಅಲ್ಲವೋ ಎಂಬುವುದನ್ನು ಪತ್ತೆಹಚ್ಚಬಹುದಾಗಿದೆ. ಪ್ರತಿ ಕಿಟ್’ನಲ್ಲಿ ಸುಮಾರು 100 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ.
ಈ ಕಿಟ್’ನಲ್ಲಿ ಮಾಂಸವು ಗೋವಿನದ್ದು ಎಂದು ಖಚಿತವಾದರೆ, ಡಿಎನ್’ಏ ಪರೀಕ್ಷೆಗಾಗಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೊಂದು ಪ್ರಾಥಮಕ ಪರೀಕ್ಷೆಯಾಗಿದ್ದು, ಸ್ಥಳದಲ್ಲೇ ಮಾದರಿಯನ್ನು ಪರೀಕ್ಷಿಸಬಹುದಾಗಿದೆ. ಡಿಎನ್ಏ ಪರೀಕ್ಷೆಗಾಗಿ ಮಾದರಿಯನ್ನು ಲ್ಯಾಬ್’ಗಳಿಗೆ ಕಳುಹಿಸಬೇಕಾಗುತ್ತದೆ, ಎಂದು ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಡಾ. ಕೃಷ್ಣನ್ ಕುಲಕರ್ಣಿ ಹೇಳಿದ್ದಾರೆ.
ಈ ಕಿಟ್’ನ್ನು ಬಳಸುವ ಮೂಲಕ ಪೊಲೀಸರು ವಾಹನಗಳನ್ನು ಜಪ್ತಿ ಮಾಡುವ ಅಗತ್ಯಬೀಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಸದ್ಯಕ್ಕೆ ಈ ಕಿಟ್’ಗಳು ಕೇವಲ ಮುಂಬೈ, ಪುಣೆ, ನಾಗಪುರದಲ್ಲಿ ಲಭ್ಯವಿದೆ.
ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಗೋಹತ್ಯೆಗೆ ನಿಷೇಧಹೇರಲಾಗಿದೆ.
