ಪೆಟ್ರೋಲ್ ಡೀಸೆಲ್ ದರ ನಿರಂತರವಾಗಿ ಏರುತ್ತಿದ್ದು  ಇದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದೀಗ ಪೆಟ್ರೋಲ್ ಬೆಲೆ ಇಳಿಸಲು ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ. 

ಮುಂಬೈ : ದೇಶದಲ್ಲಿ ದಿನದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ. ತೈಲ ಬೆಲೆ ಏರಿಕೆ ಗಗನಕ್ಕೇರುತ್ತಿರುವುದು ಜನರ ಜೇಬಿಗೆ ಕತ್ತರಿಯಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳು ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಿದ್ದು, ಇದೀಗ ಈ ಸರದಿ ಮಹಾರಾಷ್ಟ್ರ ಸರ್ಕಾರದ್ದು. 

ಮಹಾರಾಷ್ಟ್ರ ಸರ್ಕಾರವು ಭಾರತದಲ್ಲಿ ತಯಾರಾಗುವ ಫಾರಿನ್ ಲಿಕ್ಕರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಅದಕ್ಕೆ ಬದಲಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಮಾಡಿದಲ್ಲಿ ಲಿಕ್ಕರ್ ಮೇಲಿನ ತೆರಿಗೆ ಹೆಚ್ಚಳವು ಸಮಸ್ಯೆ ನಿವಾರಣೆಯ ದಾರಿಯಾಗಲಿದೆ. ಇದು ಸರ್ಕಾರದ ಮಾಸ್ಟರ್ ಪ್ಲಾನ್ ಆಗಿದೆ. 

ಕಳೆದ 2013ರಿಂದಲೂ ಕೂಡ ರಾಜ್ಯದಲ್ಲಿ ದೇಶದಲ್ಲಿ ತಯಾರಾಗುವ ವಿದೇಶೀ ಮದ್ಯಗಳ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿರಲಿಲ್ಲ. ಇದೀಗ ಜನರ ಹಿತದೃಷ್ಟಿಯಿಂದ ಅಬಕಾರಿ ಸುಂಕವನ್ನು ಏರಿಕೆ ಮಾಡಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ. 

ಇದರಿಂದ ಇನ್ನುಮುಂದೆ ದೇಶದಲ್ಲೇ ನಿರ್ಮಾಣವಾಗುವ ಫಾರಿನ್ ಬ್ರಾಂಡ್ ಮದ್ಯದ ಬೆಲೆಯಲ್ಲಿ ಏರಿಕೆಯಾಗಲಿದೆ. ರಾಜ್ಯಕ್ಕೆ ಹೆಚ್ಚಿನ ಆದಾಯವನ್ನು ತಂದುಕೊಡಲಿದೆ. 

ಈಗಾಗಲೇ ಕರ್ನಾಟಕ, ಪಶ್ಚಿಮ ಬಂಗಾಳ, ರಾಜಸ್ತಾನ, ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಮೇಲಿನ ಸೆಸ್ ಇಳಿಸುವ ಮೂಲಕ ಬೆಲೆ ಇಳಿಸಲಾಗಿದೆ.