ಮುಂಬೈ : ಮಹಾರಾಷ್ಟ್ರದಲ್ಲಿ ವಿದ್ಯುತ್ ವಿತರಣಾ ಕಂಪನಿ ನೀಡಿದ ವಿದ್ಯುತ್  ಬಿಲ್ ನೋಡಿ ಆಘಾತಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇಲ್ಲಿನ ಭರತ್ ನಗರ ಪ್ರದೇಶದಲ್ಲಿ ತರಕಾರಿ ವ್ಯಾಪಾರಿಯಾಗಿದ್ದ ಜಗನ್ನಾಥ್ ಎಂಬ ವ್ಯಕ್ತಿಗೆ ಇಲ್ಲಿನ ವಿದ್ಯುತ್ ವಿತರಣಾ ಕಂಪನಿಯು ಬರೋಬ್ಬರಿ 8.64  ಲಕ್ಷ  ವಿದ್ಯುತ್ ಬಿಲ್  ನೀಡಿದ್ದು ಇದನ್ನು ನೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ  ಡೆತ್ ನೋಟ್ ಸಿಕ್ಕಿದ್ದು,  ವಿದ್ಯುತ್ ಬಿಲ್ ಅತ್ಯಧಿಕ ಪ್ರಮಾಣದಲ್ಲಿ ಬಂದಿದ್ದು, ಇದರಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾನೆ. 

ಕಳೆದ 20 ವರ್ಷದಿಂದ ಸಣ್ಣ ಶೆಡ್ ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು  ಕುಟುಂಬ ವಾಸವಾಗಿದ್ದು, 55.519 ಯೂನಿಟ್ ವಿದ್ಯುತ್ ಉರಿಸಿದ್ದೀರಿ ಎಂದು ಲಕ್ಷ ಲಕ್ಷ ವಿದ್ಯುತ್ ಬಿಲ್ ನೀಡಲಾಗಿತ್ತು. 

ಇದೀಗ ಈ ಪ್ರಮಾಣದಲ್ಲಿ ಬಿಲ್ ನೀಡಿದ ಮಹಾರಾಷ್ಟ್ರ ಎಲೆಕ್ಟ್ರಿಸಿಟಿ   ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ಕ್ಲರ್ಕ್ ನನ್ನು ಕೆಸಲದಿಂದಲೇ ವಜಾ ಮಾಡಲಾಗಿದೆ.