ಪಂಡರಾಪುರ[ಜೂ.10]: ಪತಿಯರು ತಮ್ಮ ಪತ್ನಿಯರನ್ನು ಮೆಚ್ಚಿಸಲು ಶಾಪಿಂಗ್‌, ಒಳ್ಳೇ ಹೋಟೆಲ್‌ನಲ್ಲಿ ಊಟ ಸೇರಿದಂತೆ ಇನ್ನಿತರ ಸರ್ಕಸ್‌ಗಳನ್ನು ಮಾಡುತ್ತಾರೆ. ಆದರೆ, ಮಹಾರಾಷ್ಟ್ರದ ರೈತನೋರ್ವ ಮಾತ್ರ ಭಾವಿ ಪತ್ನಿಯ ಮೆಚ್ಚಿಸಲು ಆಕೆಯನ್ನು ತನ್ನ ಗ್ರಾಮಕ್ಕೆ ಕರೆ ತರುವ ಸಲುವಾಗಿಯೇ ಹೆಲಿಕಾಪ್ಟರ್‌ ಅನ್ನೇ ಬಾಡಿಗೆಗೆ ಪಡೆದಿದ್ದಾನೆ.

ಇತ್ತ ನವ ವಧುವನ್ನು ಕರೆದೊಯ್ಯಲು ಬಂದ ಹೆಲಿಕಾಪ್ಟರ್‌ ಅನ್ನು ಉಪ್ಲಾಯ್‌ ಗ್ರಾಮಸ್ಥರು ಕಣ್ತುಂಬಿಕೊಂಡಿದ್ದಾರೆ. ಉಪ್ಲಾಯ್‌ ಗ್ರಾಮದ ಸುಶಿಕ್ಷಿತ ಯುವತಿ ಹಾಗೂ ಪಂಡರಾಪುರದ ಮೂಲದ ರೈತನಾದ ನಿತಿನ್‌ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ನಿತಿನ್‌ ಎಂಬಿಎ ಪದವೀಧರನಾದ ಹೊರತಾಗಿಯೂ, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದಾರೆ. ಆದಾಗ್ಯೂ, ತಮ್ಮ ವಿವಾಹ ದಿನವು ವಿಶೇಷವಾಗಿರಬೇಕೆಂಬ ಕಾರಣಕ್ಕೆ ಭಾವಿ ಪತ್ನಿಯನ್ನು ಕರೆತರಲು ಕುದುರೆ ಗಾಡಿ, ಎತ್ತಿನ ಬಂಡಿ ಬದಲಿಗೆ ಹೆಲಿಕಾಪ್ಟರ್‌ನಲ್ಲೇ ಕರೆಸಿ ಗಮನ ಸೆಳೆದಿದ್ದಾರೆ.