ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾದ ರೈತ

Maharashtra Farmer ends life by consuming poison blames PM Modi in Suicide note
Highlights

ಮಹಾರಾಷ್ಟ್ರದಲ್ಲಿ ರೈತನೋರ್ವ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಆತ್ಮಹತ್ಯಾ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ.

ಮುಂಬೈ : ಮಹಾರಾಷ್ಟ್ರದಲ್ಲಿ ರೈತನೋರ್ವ ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಆತ್ಮಹತ್ಯಾ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ.

50 ವರ್ಷದ ಶಂಕ್ ಬೌರಾವ್ ಚಯರೆ ವಿಷ ಸೇವಿಸಿ ಬಳಿಕ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಅವರು ವಿಷ ಸೇವಿಸಿ ನೇಣು ಬಿಗಿದುಕೊಂಡಿದ್ದು, ಇದೇ ವೇಳೆ ಗಮನಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.

ಒಟ್ಟು 2ಪುಟಗಳಷ್ಟು ಪತ್ರವನ್ನು ಬರೆದಿದ್ದು, ಅದರಲ್ಲಿ ತಾವು ಅತ್ಯಧಿಕ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ಒಟ್ಟು 9 ಎಕರೆಯಲ್ಲಿ ಅವರು ಹತ್ತಿಯನ್ನು ಬೆಳೆದಿದ್ದು,  ಸ್ಥಳೀಯ ಸಹಕಾರಿ ಸಂಘದಿಂದ 90 ಸಾವಿರ ಸಾಲವನ್ನು ಪಡೆದುಕೊಂಡಿದ್ದರು. ಖಾಸಗಿಯವರಿಂದ 3 ಲಕ್ಷ ಸಾಲವನ್ನು ಮಾಡಿದ್ದು, ಈ ಬಗ್ಗೆ ಯಾವ ರಾಜಕಾರಣಿಗಳ ಬಳಿ ನೆರವು ಕೇಳಿದರೂ ಕೂಡ ಯಾವು ತಮಗೆ ಸಹಾಯ ಮಾಡಿಲ್ಲ ಎಂದು ಬರೆದಿದ್ದಾರೆ.

loader