ಯವತ್ಮಾಲ್‌[ಫೆ.14]: ಎರಡನೇ ಪತ್ನಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದನ್ನು ಕಂಡು ಆಕ್ರೋಶಗೊಂಡ ಮೊದಲ ಪತ್ನಿ, ತನ್ನ ಪತಿ ಹಾಗೂ ಬಿಜೆಪಿ ಶಾಸಕ ರಾಜು ನಾರಾಯಣ್‌ ಮೇಲೆ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ನಡೆದಿದೆ.

ಅರ್ಣಿ ಕ್ಷೇತ್ರದ ಬಿಜೆಪಿ ಶಾಸಕ ರಾಜು ನಾರಾಯಣ್‌ ಅವರ 42ನೇ ಹುಟ್ಟುಹಬ್ಬವನ್ನು ಅವರ ಕೆಲ ಬೆಂಬಲಿಗರು ಮತ್ತು ಎರಡನೇ ಪತ್ನಿ ಪ್ರಿಯಾ ಆಚರಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಮೊದಲ ಪತ್ನಿ ಅರ್ಚನಾ ಹಾಗೂ ಅವರ ತಾಯಿ, ಏಕಾಏಕಿ ರಾಜು ಮತ್ತು ಪ್ರಿಯಾ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕೆಲ ಸಾರ್ವಜನಿಕರೂ ಪ್ರಿಯಾ ಹಾಗೂ ರಾಜು ಮೇಲೆ ಹಲ್ಲೆ ನಡೆಸಿ ದ್ದಾರೆ.

ಇದರಿಂದ ಕಂಗಾಲಾದ ಪ್ರಿಯಾ, ಕೈಮುಗಿದು ಬಿಡುವಂತೆ ಕೋರಿಕೊಂಡಿದ್ದು, ಈ ಕುರಿತ ವಿಡಿಯೊವೊಂದು ವೈರಲ್‌ ಆಗಿದೆ.