2ನೇ ಪತ್ನಿ ಜತೆ ಬರ್ತ್ ಡೇ ಸಂಭ್ರಮದಲ್ಲಿದ್ದ ಬಿಜೆಪಿ ಶಾಸಕನಿಗೆ ಭರ್ಜರಿ ಗೂಸಾ ! ಮೊದಲ ಪತ್ನಿ ಮತ್ತು ತಾಯಿ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿತ.
ಯಾವತ್ಮಾಳ್ (ಮಹಾರಾಷ್ಟ್ರ), (ಫೆ.13): 2ನೇ ಮದುವೆಯಾದ ಬಿಜೆಪಿಯ ಶಾಸಕರೊಬ್ಬರಿಗೆ ಮೊದಲ ಪತ್ನಿ ಮತ್ತು ತಾಯಿ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದ ಯಾವತ್ಮಾಳ್ ನಲ್ಲಿ ನಡೆದಿದೆ.
ಮಹಾರಾಷ್ಟ್ರದ ಅರ್ನಿ ಕ್ಷೇತ್ರದ ಬಿಜೆಪಿ ಶಾಸಕ ರಾಜು ನಾರಾಯಣ್ ಟೋಡ್ಸಮ್ ಎಂಬುವವರು ಇತ್ತೀಚೆಗೆ ಪ್ರಿಯಾ ಶಿಂದೆ ಎಂಬುವವರನ್ನು ಮದುವೆಯಾಗಿದ್ದರು.
ರಾಜು ಅವರ ಬೆಂಬಲಿಗರು ಮತ್ತು 2ನೇ ಪತ್ನಿ ಪ್ರಿಯಾ ಶಿಂದೆ ಸೇರಿಕೊಂಡು ರಾಜು ಅವರ 42 ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಮೊದಲ ಪತ್ನಿ ಅರ್ಚನಾ ಟೋಡ್ಸನ್ ಮತ್ತು ತಾಯಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿದ್ದಾರೆ.
ಬಳಿಕ ಇಬ್ಬರು ಸೇರಿ 2ನೇ ಪತ್ನಿ ಪ್ರಿಯಾ ಅವರನ್ನು ಥಳಿಸಿದ್ದಾರೆ. ಇದನ್ನು ತಪ್ಪಿಸಲು ಬಂದ ಶಾಸಕ ರಾಜು ಅವರಿಗೂ ತಾಯಿ ಮತ್ತು ಪತ್ನಿ ಇಬ್ಬರೂ ಸೇರಿ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದೆಡೆ ಬೇಟಿ ಬಚಾವೋ, ಬೇಟಿ ಫಡಾವೋ ಎನ್ನುವ ಬಿಜೆಪಿಯವರು ಮಹಿಳೆಯರ ರಕ್ಷಣೆಗೆ ಬದ್ಧ ಎನ್ನುತ್ತಾರೆ.
ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯಾಗುವುದು ಮಹಿಳಾ ರಕ್ಷಣೆಯೇ ಎಂದು ಟ್ರೋಲ್ ಮಾಡ್ತಿದ್ದಾರೆ.
