Asianet Suvarna News Asianet Suvarna News

ಮಹಾರಾಷ್ಟ್ರದ ಪನ್ವೇಲ್'ನಲ್ಲಿ ಬಿಜೆಪಿ ದಿಗ್ವಿಜಯ; ಶಿವಸೇನೆ ವಾಶೌಟ್; ಭಿವಾಂಡಿ ನಗರಸಭೆ ಕೈಪಾಲು

ಪನ್ವೇಲ್ ಪಾಲಿಕೆಯಲ್ಲಿ ಒಟ್ಟು 78 ಕ್ಷೇತ್ರಗಳಿದ್ದು ಬಿಜೆಪಿ ಭರ್ಜರಿ ಜನಾದೇಶ ಪಡೆದಿದ್ದು 51 ಸ್ಥಾನ ಗಿಟ್ಟಿಸಿದೆ. ಶಿವಸೇನೆ ಇಲ್ಲಿ ಅಕ್ಷರಶಃ ಧೂಳೀಪಟವಾಗಿದ್ದು ಶೂನ್ಯ ಸಂಪಾದನೆ ಮಾಡಿದೆ. ಕಾಂಗ್ರೆಸ್ ಮತ್ತು ಎನ್'ಸಿಪಿ ಪಕ್ಷಗಳೂ ಕೇವಲ ಎರಡೆರಡು ಸ್ಥಾನಗಳನ್ನು ಗೆದ್ದಿವೆ. ಮಾಲೆಗಾಂವ್'ನಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ ಮತ್ತು ಬಿಜೆಪಿ ಇಲ್ಲಿ 3 ಮತ್ತು 4ನೇ ಸ್ಥಾನಕ್ಕೆ ಕುಸಿದಿವೆ.

maharashtra 3 municipal corporations poll results

ಮುಂಬೈ(ಮೇ 26): ಮಹಾರಾಷ್ಟ್ರದಲ್ಲಿ ನಡೆದ ಕೆಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಮಗೌರವ ಸಂಪಾದಿಸಿವೆ. ಭಿವಾಂಡಿ, ಪನ್ವೇಲ್ ಮತ್ತು ಮಾಲೇಗಾಂವ್ ನಗರಪಾಲಿಕೆಗಳ ಪೈಕಿ ಪಾನ್ವೇಲ್ ಪಾಲಿಕೆ ಬಿಜೆಪಿ ಪಾಲಾಗಿದೆ. ಭಿವಾಂಡಿಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಮಾಲೆಗಾಂವ್ ನಗರಸಭೆ ಅತಂತ್ರ ಸ್ಥಿತಿಯಲ್ಲಿದೆ.

ಭಿವಾಂಡಿಯ 90 ಕ್ಷೇತ್ರಗಳ ಪಾಲಿಕೆಯಲ್ಲಿ ಕಾಂಗ್ರೆಸ್ 47 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದಗೆ ಹಿಡಿದುಕೊಂಡಿದೆ. ಬಿಜೆಪಿ ಇಲ್ಲಿ ಎರಡನೇ ಸ್ಥಾನ ಪಡೆದಿದೆ.

ಪನ್ವೇಲ್ ಪಾಲಿಕೆಯಲ್ಲಿ ಒಟ್ಟು 78 ಕ್ಷೇತ್ರಗಳಿದ್ದು ಬಿಜೆಪಿ ಭರ್ಜರಿ ಜನಾದೇಶ ಪಡೆದಿದ್ದು 51 ಸ್ಥಾನ ಗಿಟ್ಟಿಸಿದೆ. ಶಿವಸೇನೆ ಇಲ್ಲಿ ಅಕ್ಷರಶಃ ಧೂಳೀಪಟವಾಗಿದ್ದು ಶೂನ್ಯ ಸಂಪಾದನೆ ಮಾಡಿದೆ. ಕಾಂಗ್ರೆಸ್ ಮತ್ತು ಎನ್'ಸಿಪಿ ಪಕ್ಷಗಳೂ ಕೇವಲ ಎರಡೆರಡು ಸ್ಥಾನಗಳನ್ನು ಗೆದ್ದಿವೆ.

ಇನ್ನು, ಮಾಲೆಗಾಂವ್'ನಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ ಮತ್ತು ಬಿಜೆಪಿ ಇಲ್ಲಿ 3 ಮತ್ತು 4ನೇ ಸ್ಥಾನಕ್ಕೆ ಕುಸಿದಿವೆ.

ಭಿವಾಂಡಿ ನಗರಪಾಲಿಕೆ:
ಒಟ್ಟು ಸ್ಥಾನ: 90 ಕ್ಷೇತ್ರಗಳು
ಕಾಂಗ್ರೆಸ್: 47
ಬಿಜೆಪಿ: 19
ಶಿವಸೇನೆ: 12
ಎಸ್'ಪಿ: 2
ಇತರೆ: 10

ಪನ್ವೇಲ್ ನಗರಪಾಲಿಕೆ:
ಒಟ್ಟು ಸ್ಥಾನ: 78 ಕ್ಷೇತ್ರಗಳು
ಬಿಜೆಪಿ: 51
ಪಿಡಬ್ಲ್ಯೂಪಿಐ: 23
ಎನ್'ಸಿಪಿ: 2
ಕಾಂಗ್ರೆಸ್: 2

ಮಾಲೇಗಾಂವ್ ನಗರಪಾಲಿಕೆ:
ಒಟ್ಟು 84 ಸ್ಥಾನ
ಕಾಂಗ್ರೆಸ್: 28
ಎನ್'ಸಿಪಿ: 20
ಶಿವಸೇನೆ: 13
ಬಿಜೆಪಿ: 9
ಎಂಐಎಂ: 7
ಇತರೆ: 7

Follow Us:
Download App:
  • android
  • ios