ನವದೆಹಲಿ(ಸೆ.01): ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಆಶಾವಾದವೊಂದು ಮೂಡಿದೆ. ಮೂರು ರಾಜ್ಯಗಳ ನಡುವೆ ಇರುವ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆಗೆ ಮಹದಾಯಿ ನ್ಯಾಯಾಧಿಕರಣ ಮುನ್ನುಡಿ ಬರೆದಿದೆ. ಮಹದಾಯಿ ನ್ಯಾಯಾಧಿಕಾರಣ ಸೂಚಿಸಿದ ಮಾತುಕತೆಯ ದಾರಿಯನ್ನು ಸಿಎಂ ಸಿದ್ಧರಾಮಯ್ಯ ಸ್ವಾಗತಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಎಂಗಳ ಸಭೆ ನಡೆಸಿ ಒಮ್ಮತಕ್ಕೆ ಬರಲು ನ್ಯಾಯಾಧಿಕರಣ ಸೂಚನೆ: ಮಹದಾಯಿ ನದಿ ನೀರಿನ ಹಂಚಿಕೆಯನ್ನು ಬಗೆಹರಿಸಲು ಮಾತುಕತೆಯೇ ಸೂಕ್ತ ಎಂದು ನ್ಯಾಯಾಧಿಕರಣ ಸೂಚಿಸಿದೆ. ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳು ಒಟ್ಟಿಗೆ ಕುಳಿತು ಪ್ರಯತ್ನಿಸಬೇಕೆಂದು ಮಹದಾಯಿ ನ್ಯಾಯಾಧಿಕಾರಣ ಹೇಳಿದೆ. ಇದಕ್ಕೆ ಮೂರು ರಾಜ್ಯಗಳೂ ಸಮ್ಮತಿಸಿವೆ.

ಇಂದು ಮಹದಾಯಿ ನ್ಯಾಯಾಧಿಕರಣದಲ್ಲಿ ಸಾಕ್ಷ್ಯಗಳ ಪರಿಶೀಲನೆ ವೇಳೆ ಮೂರು ರಾಜ್ಯಗಳು ಪರಸ್ಪರ ಕುಳಿತು ಮಾತನಾಡಿ ವಿವಾದ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ನ್ಯಾಯಮೂರ್ತಿ ಜೆಎಸ್​ ಪಾಂಚಾಲ್​ ಹೇಳಿದ್ದಾರೆ. ಈ ಮಾತಿಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಪರ ವಕೀಲರು ಸಮ್ಮತಿ ಸೂಚಿಸಿದ್ದಾರೆ. ಈ ಬೆಳವಣಿಗೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್​ ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಈ ಮೂಲಕ ಕಳೆದ 3 ದಶಕಗಳಿಂದ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವ ಮಲಪ್ರಭಾ ಕಣಿವೆಯ ಜನರಿಗೆ ಹೊಸ ಆಶಾ ಕಿರಣವೊಂದು ಮತ್ತೊಮ್ಮೆ ಹುಟ್ಟಿಕೊಂಡಿದೆ.

- ದೆಹಲಿಯಿಂದ ಪ್ರಶಾಂತ್​ ನಾಥು, ಸುವರ್ಣನ್ಯೂಸ್​