ಬೆಂಗಳೂರಿನ ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಮಹಾದಾಯಿ ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದೆ.
ಬೆಂಗಳೂರು (ಡಿ.24): ಬೆಂಗಳೂರಿನ ಬಿಜೆಪಿ ಕಚೇರಿ ಎದುರು ನಡೆಸುತ್ತಿರುವ ಮಹಾದಾಯಿ ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬರುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ ಹೋರಾಟಗಾರರು ಈಡೀ ರಾತ್ರಿ ಹೋರಾಟವನ್ನು ಮುಂದುವರಿಸಿದ್ದಾರೆ.
ಬಿಜೆಪಿ ನಾಯಕರು ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸುವ ಕುರಿತು ಭರವಸೆ ಮಾತ್ರ ಕೊಟ್ಟಿದ್ದಾರೆ. ಆದರೆ ಕುಡಿಯುವ ನೀರು ಕೊಡುವುದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿಲ್ಲ ಎಂದು ಉತ್ತರ ಕರ್ನಾಟಕದ ನೂರಾರು ರೈತರು ಬಿಜೆಪಿ ಕಚೇರಿ ಎದುರು ಈಡೀ ರಾತ್ರಿ ಪ್ರತಿಭಟನೆ ಮುಂದುವರೆಸಿದರು.
ಕಳೆದ ರಾತ್ರಿ ರಸ್ತೆ ಮಧ್ಯೆಯೇ ಅಡುಗೆ ತಯಾರಿಸಿ ಊಟ ಮಾಡಿದ ಪ್ರತಿಭಟನಕಾರರು ಇಂದು ಕೂಡ ಯಥಾಸ್ಥಿತಿ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ.
ಮಹಾದಾಯಿ ನೀರಿನ ಸಮಸ್ಯೆಗೆ ಬಿಜೆಪಿ ನಾಯಕರು ಸ್ಪಷ್ಠಿಕರಣ ಕೋಟ್ಟ ನಂತರವೇ ನಮ್ಮ ಊರಿಗೆ ಹಿಂತಿರುಗುವುದು ಎಂದು ಪ್ರತಿಭಟನಕಾರರು ಬಿಗಿಪಟ್ಟು ಹಿಡಿದಿದ್ದಾರೆ.
