- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿವಾದಕ್ಕೆ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆ.- ಪ್ರತಿಭಟನೆಗೆ ಸಿನಿಮಾ ಛೇಂಬರ್ಸ್ ಸಾಥ್. 

ಬೆಂಗಳೂರು: ಇಲ್ಲಿ ಕಳೆದ ನಾಲ್ಕು ದಿನಗಳಿಂದ ಮಹದಾಯಿ ಯೋಜನೆಗೆ ಸಂಬಂಧಿಸಿದಂ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ, ನಡೆಸುತ್ತಿದ್ದ ಪ್ರತಿಭಟನೆ ಕೊನೆಕೊಂಡಿದೆ. ಆದರೆ, ಊರಿನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.

'ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದೇವೆ. ಹೋರಾಟಗಾರರು ಊರಿಗೆ ತೆರಳುತ್ತೇವೆ,' ಎಂದು ಫಿಲಂ ಛೇಂಬರ್ಸ್‌ನಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಮಹದಾಯಿ ಹೋರಾಟ ಸಮನ್ವಯ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಹೇಳಿದ್ದಾರೆ.

'ಸ್ಯಾಂಡಲ್‌ವುಡ್ ಬೆಂಬಲದಿಂದ ನಮಗೆ ಮತ್ತಷ್ಟು ಬಲ ಬಂದಿದೆ. ಕಲಾವಿದರ ಬೆಂಬಲದಿಂದ ಹೋರಾಟಕ್ಕೆ ಆನೆ ಬಲ ಸಿಕ್ಕಿದೆ. ಈ ಹಿಂದೆಯೂ ನಮಗೆ ಸ್ಯಾಂಡಲ್‌ವುಡ್ ಬೆಂಬಲ ನೀಡಿತ್ತು. ಮುಖಂಡರು ಮಾತ್ರ ಇಂದು ಬೆಂಗಳೂರಿನಲ್ಲಿ ಇರುತ್ತಾರೆ. ಹೋರಾಟದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ವಾಪಸ್ ಹೋಗುತ್ತೇವೆ,' ಎಂದು ಸೊಬರದಮಠ ಹೇಳಿದ್ದಾರೆ.