ಮಹದಾಯಿ‌ ಹೋರಾಟಗಾರ ಮುಖಂಡರು ರಾಜಭವನ ತಲುಪಿದ್ದಾರೆ. ಚಾಲುಕ್ಯ ಸರ್ಕಲ್'ನಿಂದ ರಾಜಭವನಕ್ಕೆ ಪೊಲೀಸ್ ಜೀಪ್ ನಲ್ಲಿ‌ ಕರೆ ತಂದಿದ್ದಾರೆ.  

ಬೆಂಗಳೂರು (ಡಿ.27): ಮಹದಾಯಿ‌ ಹೋರಾಟಗಾರ ಮುಖಂಡರು ರಾಜಭವನ ತಲುಪಿದ್ದಾರೆ. ಚಾಲುಕ್ಯ ಸರ್ಕಲ್'ನಿಂದ ರಾಜಭವನಕ್ಕೆ ಪೊಲೀಸ್ ಜೀಪ್ ನಲ್ಲಿ‌ ಕರೆ ತಂದಿದ್ದಾರೆ.

ರಾಜ್ಯಪಾಲರ ಭೇಟಿಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಾರ್ಯದರ್ಶಿ ಮನವಿ ಸ್ವೀಕರಿಸಿದ್ದಾರೆ. ರಾಜಭವನ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ರೈತರು ತೆರಳಲಿದ್ದಾರೆ. ಸಿಎಂ ಮನೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಅಲ್ಲಿಂದ ಜೆಡಿಎಸ್​ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಪ್ರತಿಭಟನಾಕಾರರನ್ನು ಹತ್ತಿಕ್ಕುವಾಗ ಬಂಧನ ವೇಳೆ ಶೋಭಾ ಕರಂದ್ಲಾಜೆ ಬಿದ್ದು ಒದ್ದಾಡಿದ್ದಾರೆ. ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಘೋಷಣೆ ಕೂಗಿದ್ದಾರೆ. ಅವರನ್ನು ಬಂಧಿಸಿ ಬಸ್ ಹತ್ತಿಸಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ.