ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.  

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಯಾದ ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಲು ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಾಜಧಾನಿ ದೆಹಲಿಗೆ ತೆರಳಿದ್ದ 23 ಜನರ ರೈತರ ನಿಯೋಗ ಭಾನುವಾರ ಹುಬ್ಬಳ್ಳಿಗೆ ಆಗಮಿಸಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂದರ್ಭದಲ್ಲಿ ಭೇಟಿಯ ವಿವರ ನೀಡಿದ ರೈತ ಮುಖಂಡ ಶಂಕ್ರಪ್ಪ ಅಂಬಲಿ, ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಪ್ರಧಾನಿ ಅವರ ಪರವಾಗಿ ಗಡ್ಕರಿ ಅವರು ನಿಯೋಗದೊಂದಿಗೆ ಚರ್ಚೆ ಮಾಡಿ ಈ ಭರವಸೆ ನೀಡಿದರು ಎಂದರು. ಜುಲೈ 21ರಂದು ಮಹದಾಯಿ ಯೋಜನೆ ಅನುಷ್ಠಾನದ ಕುರಿತು ನ್ಯಾಯಾಧಿಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದ್ದು, ಗಡ್ಕರಿ ಭರವಸೆ ಮಹತ್ವ ಪಡೆದಿದೆ.

ವರದಿ ಸಲ್ಲಿಕೆ: ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಭೇಟಿ ಸಂದರ್ಭದಲ್ಲಿ ನಿಯೋಗದಿಂದ ಅವರಿಗೆ 9 ಸಾವಿರ ಕೋಟಿ ವೆಚ್ಚದ 9 ತಾಲೂಕಿನ ಸಣ್ಣ ನೀರಾವರಿ ಯೋಜನೆಯ ವರದಿ ಸಲ್ಲಿಸಿದ್ದೇವೆ. ಮಹದಾಯಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತವಾಗಿದೆ ಎಂದರು.