ಪ್ರಧಾನಿ ಮೋದಿಯವರ ಸ್ವಚ್ಚ ಭಾರತ್ ಅಭಿಯಾನದ ಬಗ್ಗೆ ದೇಶದೆಲ್ಲೆಡೆ ಜಾಗೃತಿ ಹೆಚ್ಚಾಗುತ್ತಿದೆ. ಇಲ್ಲೊಬ್ಬರು ಮೋದಿಯಿಂದ ಪ್ರೇರೇಪಣೆ ಪಡೆದು ತಮ್ಮ ಮಗಳಿಗೂ ’ಸ್ವಚ್ಚತಾ’ ಎಂದು ಹೆಸರಿಟ್ಟಿದ್ದಾರೆ. 

ಮಹಾರಾಷ್ಟ್ರ (ಫೆ. 23): ಫೋಷಕರು ತಮ್ಮ ಮಕ್ಕಳಿಗೆ ಸಿನಿಮಾ ಹೀರೋ-ಹೀರೋಹಿನ್‌ ಅಥವಾ ದೇವರ ನಾಮಗಳನ್ನು ನಾಮಕರಣ ಮಾಡುವುದರಲ್ಲಿ ಅಂಥ ವಿಶೇಷತೆ ಏನೂ ಇಲ್ಲ. ಆದರೆ, ಮಹಾರಾಷ್ಟ್ರದ ಲಾತೂರ್‌ನಲ್ಲಿ ದಂಪತಿ ತಮ್ಮ ಮುದ್ದಿನ ಮಗಳಿಗೆ ‘ಸ್ವಚ್ಛತಾ’ ಎಂದು ಹೆಸರಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೇಪಣೆ ಪಡೆದು, ಈ ನಾಮಕರಣ ಮಾಡಿದ್ದಾರೆ. ಅಲ್ಲದೆ, ಆಕೆಯನ್ನು ಐಎಎಸ್‌ ಅಧಿಕಾರಿಯನ್ನಾಗಿ ಮಾಡಲು ಯತ್ನಿಸುತ್ತೇವೆ. ನಿಮ್ಮ ಮಕ್ಕಳಿಗೆ ‘ಸ್ವಚ್ಛತಾ’ ಎಂದು ಹೆಸರಿಡದಿದ್ದರೂ ತೊಂದರೆ ಇಲ್ಲ. ಆದರೆ, ನಿಮ್ಮ ಸುತ್ತ-ಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಜನರಿಗೆ ಕರೆ ಕೂಡ ನೀಡಿದ್ದಾರೆ.