ಮಾಗಡಿಯ ಕುದೂರು ಪೊಲೀಸ್ ಠಾಣೆಗೆ ನುಗ್ಗಿದ್ದ ಜೆಡಿಎಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಠಾಣೆಯ ಸಿಪಿಐ ನಂದೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪವಿದೆ.
ಬೆಂಗಳೂರು(ಜ. 20): ಪೊಲೀಸರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಧಮಕಿ ಹಾಕಿದ ಪ್ರಕರಣದ ಆರೋಪಿ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಜಾಮೀನು ಸಿಕ್ಕಿದೆ. ರಾಮನಗರ ಜಿಲ್ಲೆಯ ಮಾಗಡಿಯ ಕೋರ್ಟ್ ಬಾಲಕೃಷ್ಣ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂ.ನ ಬಾಂಡ್ ಪಡೆದುಕೊಂಡಿರುವ ಕೋರ್ಟ್, ಪ್ರತೀವಾರ ಠಾಣೆಗೆ ಹಾಜರಾಗುವಂತೆ, ಹಾಗೂ ಸಾಕ್ಷ್ಯನಾಶ ಮಾಡದಂತೆ ಬಾಲಕೃಷ್ಣಗೆ ಸೂಚನೆ ನೀಡಿದೆ. ಮಾಗಡಿ ಶಾಸಕರು ಖುದ್ದಾಗಿ ಕೋರ್ಟ್'ಗೆ ಇಂದು ಹಾಜರಾಗಿದ್ದರು.
ಮಾಗಡಿಯ ಕುದೂರು ಪೊಲೀಸ್ ಠಾಣೆಗೆ ನುಗ್ಗಿದ್ದ ಜೆಡಿಎಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಠಾಣೆಯ ಸಿಪಿಐ ನಂದೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪವಿದೆ. ತಾನು ಪೊಲೀಸ್ ಇನ್ಸ್'ಪೆಕ್ಟರ್'ರನ್ನು ನಿಂದಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಾಲಕೃಷ್ಣ ಸಮರ್ಥಿಸಿಕೊಂಡಿದ್ದಾರೆ.
