Asianet Suvarna News Asianet Suvarna News

ರಾಜಕಾರಣಿಗಳ ಕಟೌಟ್'ಗಳಿಗೆ ಬ್ರೇಕ್? ಜೀವಂತ ವ್ಯಕ್ತಿಗಳ ಬ್ಯಾನರ್ ಹಾಕಿಸಬೇಡಿ: ಕೋರ್ಟ್ ಆದೇಶ

1959ರ ತಮಿಳುನಾಡು ಸಾರ್ವಜನಿಕ ಸ್ಥಳಗಳ ಕಾಯ್ದೆಗೆ ಕಾಲಾನುಗುಣವಾಗಿ ತಿದ್ದುಪಡಿ ಆಗುತ್ತಿರಬೇಕು. ಹೋರ್ಡಿಂಗ್ಸ್ ನಿಲ್ಲಿಸಲು ಅನುಮತಿ ಕೊಟ್ಟರೂ, ಅವುಗಳಲ್ಲಿ ಜೀವಂತ ವ್ಯಕ್ತಿಗಳ ಫೋಟೋ ಇರದಂತೆ ಎಚ್ಚರವಹಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಆದರೆ, ಹೈಕೋರ್ಟ್'ನ ಈ ನಿರ್ದೇಶನವು ಜಾಹೀರಾತು, ಸಿನಿಮಾ ಪೋಸ್ಟರ್'ಗಳಿಗೂ ಅನ್ವಯಿಸುತ್ತದಾ ಎಂಬುದು ಗೊತ್ತಿಲ್ಲ.

madras high court orders ban on hoardings with living persons

ಚೆನ್ನೈ(ಅ. 25): ನಗರಗಳಲ್ಲಿ ಎತ್ತ ನೋಡಿದರೂ ರಾಜಕೀಯ ಪಕ್ಷಗಳ ಬ್ಯಾನರ್ಸ್, ಕಟೌಟ್, ಫ್ಲೆಕ್ಸ್'ಗಳೇ ರಾರಾಜಿಸುತ್ತಿರುತ್ತವೆ. ನಗರದ ಅಂದ ಹಾಳುಗೆಡುವುದಲ್ಲದೇ, ವ್ಯಕ್ತಿಗಳ ಅದರಲ್ಲೂ ರಾಜಕಾರಣಿಗಳ ವೈಭವೀಕರಣ ಮಾಡಲಾಗುತ್ತದೆ. ಇಂಥವಕ್ಕೆಲ್ಲಾ ಬ್ರೇಕ್ ಹಾಕಿ ಕೋರ್ಟ್'ವೊಂದು ಆದೇಶಿಸಿದೆ. ಜೀವಂತ ವ್ಯಕ್ತಿಗಳ ಫೋಟೋಗಳಿರುವ ಬ್ಯಾನರ್, ಬೋರ್ಡ್, ಫ್ಲೆಕ್ಸ್ ಮೊದಲಾದವನ್ನು ಸಾರ್ವಜನಿಕವಾಗಿ ಹಾಕುವಂತಿಲ್ಲ ಎಂದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಮದಿ ಎಂಬ ರಾಜಕಾರಣಿಯೊಬ್ಬರ ಬ್ಯಾನರ್'ಗಳನ್ನು ತಮ್ಮ ಖಾಸಗಿ ಸ್ಥಳದಲ್ಲಿ ಅನುಮತಿ ಇಲ್ಲದೆಯೇ ಹಾಕಿದ್ದಾರೆ. ದಯವಿಟ್ಟು ಅವನ್ನು ತೆಗೆದುಹಾಕಿಸಿ ಎಂದು ತಿರುಲೋಚನಾಕುಮಾರಿ ಎಂಬುವರು ಹೈಕೋರ್ಟ್'ನಲ್ಲಿ ಮನವಿ ಮಾಡಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ವೈದ್ಯನಾಥನ್ ನೇತೃತ್ವದ ಹೈಕೋರ್ಟ್ ಪೀಠ, ಬ್ಯಾನರ್, ಫ್ಲೆಕ್ಸ್ ಮೊದಲಾದವುಗಳಲ್ಲಿ ಜೀವಂತ ವ್ಯಕ್ತಿಗಳ ಫೋಟೋ ಇರದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ಅಲ್ಲದೇ, ತಿರುಲೋಚನಾಕುಮಾರಿ ಅವರಿಗೆ ಸೇರಿದ ಸ್ಥಳದಲ್ಲಿ ಹಾಕಲಾಗಿರುವ ಬ್ಯಾನರ್'ಗಳನ್ನು ಕೂಡಲೇ ತೆಗೆದುಹಾಕಿಸಿ ಎಂದೂ ಸರಕಾರಕ್ಕೆ ಆದೇಶ ನೀಡಿತು. ತೆರವುಗೊಳಿಸಲು ಯಾರೇ ಅಡ್ಡಿಪಡಿಸಿದರೂ ಅವರ ವಿರುದ್ಧ ಪ್ರಕರಣ ದಾಖಲಿಸಿರಿ ಎಂದು ಪೊಲೀಸರಿಗೂ ನ್ಯಾಯಾಲಯ ಸೂಚನೆ ನೀಡಿದೆ.

1959ರ ತಮಿಳುನಾಡು ಸಾರ್ವಜನಿಕ ಸ್ಥಳಗಳ ಕಾಯ್ದೆಗೆ ಕಾಲಾನುಗುಣವಾಗಿ ತಿದ್ದುಪಡಿ ಆಗುತ್ತಿರಬೇಕು. ಹೋರ್ಡಿಂಗ್ಸ್ ನಿಲ್ಲಿಸಲು ಅನುಮತಿ ಕೊಟ್ಟರೂ, ಅವುಗಳಲ್ಲಿ ಜೀವಂತ ವ್ಯಕ್ತಿಗಳ ಫೋಟೋ ಇರದಂತೆ ಎಚ್ಚರವಹಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಆದರೆ, ಹೈಕೋರ್ಟ್'ನ ಈ ನಿರ್ದೇಶನವು ಜಾಹೀರಾತು, ಸಿನಿಮಾ ಪೋಸ್ಟರ್'ಗಳಿಗೂ ಅನ್ವಯಿಸುತ್ತದಾ ಎಂಬುದು ಗೊತ್ತಿಲ್ಲ.

ಮದಿಯಿಂದ ಬೆದರಿಕೆ:
ತಿರುಲೋಚನಾಕುಮಾರಿ ಅವರು ಹೈಕೋರ್ಟ್ ಮೆಟ್ಟಿಲೇರುವ ಮುನ್ನ ತಮ್ಮ ಜಾಗದಲ್ಲಿದ್ದ ಬ್ಯಾನರ್'ಗಳನ್ನು ತೆರವುಗೊಳಿಸಲು ಸಾಕಷ್ಟು ಪ್ರಯತ್ನಿಸಿ ವಿಫಲರಾಗಿದ್ದರು. ಮದಿ ಮತ್ತವರ ಬೆಂಬಲಿಗರಿಗೆ ಮನವಿ ಮಾಡಿಕೊಂಡಾಗ ಈ ಮಹಿಳೆಯನ್ನು ಬೆದರಿಸಲಾಯಿತು. ಪೊಲೀಸರಿಗೆ ಹೋಗಿ ದೂರು ನೀಡಿದರೂ ಏನು ಪ್ರಯೋಜನವಾಗಲಿಲ್ಲ. ಸುಮ್ಮನಿರದಿದ್ದರೆ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ತ್ರಿಲೋಚನಾಕುಮಾರಿಯವನರನ್ನೇ ಪೊಲೀಸರು ಹೆದರಿಸುತ್ತಾರೆ.

ಮಾಹಿತಿ: ನ್ಯೂಸ್18
(ಫೋಟೋ: ಕೇವಲ ಪ್ರಾತಿನಿಧಿಕ ಮಾತ್ರ)

Follow Us:
Download App:
  • android
  • ios