ನವದೆಹಲಿ(ಡಿ.17): ಇ - ಆನ್‌ಲೈನ್‌ನಲ್ಲಿ  ಔಷಧ ಮಾರಾಟಕ್ಕೆ ಸಂಬಂಧಿಸಿದ ಕಾನೂನಾತ್ಮಕ ನಿಯಮಗಳನ್ನು ಜನವರಿ 31 ರ ಒಳಗೆ  ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈ ಕೋರ್ಟ್ ಹೇಳಿದೆ. ಅಲ್ಲದೇ ಜನವರಿ 31 , 2019ರವರೆಗೂ ಮಾರಾಟ ನಿಷೇಧಿಸಿದೆ. 

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಅವರ ನೇತೃತ್ವದ ನ್ಯಾಯಪೀಠ  ಇದುವರೆಗೆ ಆನ್ ಲೈನ್ ನಲ್ಲಿ ಔಷಧ ಮಾರಾಟ ಮಾಡಲು  ಲೈಸೆನ್ಸ್ ನೀಡಲು ಇರುವ ವಿಚಾರ ಡ್ರಾಪ್ಟ್ ನಲ್ಲಿ ಇದ್ದು, ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಸದ್ಯಕ್ಕೆ ಆನ್ ಲೈನ್ ಮಾರಾಟ ನಿಷೇಧಿಸಲಾಗುತ್ತಿದೆ ಎಂದು ಹೇಳಿದೆ. 

ತಮಿಳುನಾಡಿನ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಪ್ರಾತಿನಿಧ್ಯ ವಹಿಸಿ ಕೆ.ಕೆ ಸೆಲ್ವಮ್ ಎನ್ನುವವರು ಮದ್ರಾಸ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

ಮನಬಂದಂತೆ ಆನ್ ಲೈನ್ ನಲ್ಲಿ ಔಷಧಗಳನ್ನು ಮನಬಂದಂತೆ ಮಾರಾಟ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಡಿವಾಣ ಹೇರಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು. 

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಕೇಂದ್ರ ಸರ್ಕಾರ ಕಾನೂನಾತ್ಮಕ ನಿಯಮಗಳ ರೂಪಿಸುವ ಬಗ್ಗೆ ತಿಳಿಸಿ ಮಾರಾಟಕ್ಕೆ ನಿಷೇಧ ಹೇರಿದೆ.