ಕರ್ನಾಟಕದ ಸುಂದರ ತಾಣ, ಪ್ರಕೃತಿಯ ರಮ್ಯಚೇತನ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ ಕೊಡಗಿನಲ್ಲಿ  ರಾಪ್ಟಿಂಗ್ ಸದ್ದು ಜೋರಾಗಿದೆ. ಮಳೆಗಾಲದ ಹನಿಗಳ ಕಲರವದ ನಡುವೆ ಹಚ್ಚ ಹಸಿರಿನ ಬೆಟ್ಟ ಗುಡ್ಡದಿಂದ ಕುಡಿರುವ ಪ್ರಕೃತಿಯ ಮಡಿಲಲ್ಲಿ  ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ದುಬಾರೆ ಆನೆ ಶಿಬಿರದಲ್ಲೀಗ ಹೊಸ ಲೋಕವೇ ಅನಾವರಣವಾಗಿದೆ.

ಮಡಿಕೇರಿ(ಜು.30): ಕರ್ನಾಟಕದ ಸುಂದರ ತಾಣ, ಪ್ರಕೃತಿಯ ರಮ್ಯಚೇತನ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣ ಕೊಡಗಿನಲ್ಲಿ ರಾಪ್ಟಿಂಗ್ ಸದ್ದು ಜೋರಾಗಿದೆ. ಮಳೆಗಾಲದ ಹನಿಗಳ ಕಲರವದ ನಡುವೆ ಹಚ್ಚ ಹಸಿರಿನ ಬೆಟ್ಟ ಗುಡ್ಡದಿಂದ ಕುಡಿರುವ ಪ್ರಕೃತಿಯ ಮಡಿಲಲ್ಲಿ ಪ್ರವಾಸಿಗರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ದುಬಾರೆ ಆನೆ ಶಿಬಿರದಲ್ಲೀಗ ಹೊಸ ಲೋಕವೇ ಅನಾವರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳೆಗಾಲ ಶುರುವಾದ್ರೆ ದುಬಾರೆಯಲ್ಲಿ ಹೂಸದೊಂದು ಜಗತ್ತೇ ತೆರೆದುಕೊಳ್ಳುತ್ತೆ. ಪ್ರವಾಸಿಗರೂ ಹಾಗೇನೆ ತಂಡೋಪ ತಂಡವಾಗಿ ಲಗ್ಗೆಯಿಡುತ್ತಾರೆ. ಆದರೂ ಈ ವೀಕೆಂಡ್​'ನಲ್ಲಿ ಜನವೋ ಜನ, ರಾಪ್ಟಿಂಗ್, ಬೋಟಿಂಗ್, ನೀರಿನ ಅಲೆಗಳ ಜೊತೆ ಮಸ್ತಿ ಹೀಗೆ ಎಂಜಾಯ್ ಮಾಡುತ್ತಾರೆ.

ನ್ನು ಕಾವೇರಿ ನದಿಯಲ್ಲಿ ರಾಪ್ಟಿಂಗ್ ಮಾಡೋದು ಸುಲಭದ ಮಾತೇನಲ್ಲ, ನದಿ ಹರಿಯುತ್ತಿರೋ ವೇಗವನ್ನೂಮ್ಮೆ ನೋಡಿದರೆ ಎದೆ ನಡುಗಿಬಿಡುತ್ತೆ. ಇದರ ನಡುವೆಯೂ ದೈರ್ಯಮಾಡಿ ಬೋಟ್ ಏರಿ ಹೊರಟರೆ ಜೀವಮಾನದಲ್ಲಿ ಮರೆಯಾಲಾಗದ ಕ್ಷಣಗಳು ನಿಜಕ್ಕೂ ನಮ್ಮದಾಗುತ್ತದೆ.

ಒಟ್ಟಿನಲಿ ಪ್ರಕೃತಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗ. ಕೆಲಸದ ಒತ್ತಡದ ನಡುವೆ ಸ್ವಲ್ಪ ಜಾಲಿ ಮಾಡುವರಿಗೆ ಇದು ನಿಜಕ್ಕೂ ಫೇವರಿಟ್ ಸ್ಫಾಟ್. ಮಳೆಗಾಲ ಮುಗಿಯುವ ಮುನ್ನ ಒಂದು ವೀಕೆಂಡ್'​ನಲ್ಲಿ ಒಮ್ಮ ಭೇಟಿ ಕೊಟ್ಟು ನೋಡಿ.