ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಬಳಕೆ ಮಾಡುವ ಸಲುವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸಹದ್ಯೋಗಿಗಳಿಗೆ ಈ ಸೂಚನೆ ನೀಡಿದ್ದರು.

ಭೋಪಾಲ್(ಮೇ.02): ಸಾರ್ವಜನಿಕರ ತೆರಿಗೆ ಹಣವನ್ನು ಉಳಿತಾಯ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟದ ಸದಸ್ಯರು ತಮ್ಮ ಊಟದ ಡಬ್ಬಿಗಳನ್ನು ಮನೆಯಿಂದಲೇ ತಂದಿದ್ದರು. ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಬಳಕೆ ಮಾಡುವ ಸಲುವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸಹದ್ಯೋಗಿಗಳಿಗೆ ಈ ಸೂಚನೆ ನೀಡಿದ್ದರು. ಅದರಂತೆ, ಮಂಗಳವಾರ ನಡೆದ ವಿಧಾನಸಭೆ ಅವೇಶನಕ್ಕೆ ಎಲ್ಲ ಸಚಿವ ಸಂಪುಟ ಸದಸ್ಯರು ಊಟದ ಡಬ್ಬಿ ಸಮೇತವಾಗಿ ಬಂದಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಚೌಹಾಣ್, ‘ಮಂಗಳವಾರದ ಕ್ಯಾಬಿನೆಟ್‌ಗೆ ಎಲ್ಲ ಸದಸ್ಯರು ಅವರವರ ಮನೆಯಿಂದಲೇ ಊಟದ ಡಬ್ಬಿಗಳನ್ನು ತಂದಿದ್ದರು. ಎಲ್ಲ ನಾಯಕರೊಂದಿಗೆ ಮನೆಯಿಂದ ತಂದ ಆಹಾರವನ್ನು ಸೇವನೆ ಮಾಡಿದ್ದು ಅದ್ಭುತ ಕ್ಷಣ’ ಎಂದು ಬಣ್ಣಿಸಿದ್ದಾರೆ.