Asianet Suvarna News Asianet Suvarna News

ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರೆಸೆಂಟ್ ಬದಲು ಜೈಹಿಂದ್ ಕಡ್ಡಾಯ : ಸರ್ಕಾರ

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರ್ಕಾರ ಈ ಆದೇಶ ಹೊರಡಿಸಿದ್ದು  ಉಪಾಧ್ಯಾಯರು ಹಾಜರಿ ನಮೂದಿಸಲು ವಿದ್ಯಾರ್ಥಿಗಳ ಹೆಸರನ್ನು ಕರೆದಾಗ  ಪ್ರೆಸೆಂಟ್, ಎಸ್ ಮೇಡಮ್/ಸರ್ ಎನ್ನುವ ಬದಲು  ಜೈಹಿಂದ್ ಎನ್ನಬೇಕು' ಎಂದು ಆದೇಶಿಸಲಾಗಿದೆ.  

Madhya Pradesh school students to answer attendance call with Jai Hind not 'Present Maam from July 1

ಭೋಪಾಲ್(ಮೇ.16): ಮಧ್ಯಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರೆಸೆಂಟ್, ಎಸ್ ಮೇಡಮ್/ಸರ್ ಎನ್ನುವ  ಬದಲು ಜೈಹಿಂದ್ ಎನ್ನಬೇಕು' ಇಂತಹ ಆದೇಶವನ್ನು ಅಲ್ಲಿನ ಸರ್ಕಾರ ಆದೇಶಿಸಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರ್ಕಾರ ಈ ಆದೇಶ ಹೊರಡಿಸಿದ್ದು  ಉಪಾಧ್ಯಾಯರು ಹಾಜರಿ ನಮೂದಿಸಲು ವಿದ್ಯಾರ್ಥಿಗಳ ಹೆಸರನ್ನು ಕರೆದಾಗ  ಪ್ರೆಸೆಂಟ್, ಎಸ್ ಮೇಡಮ್/ಸರ್ ಎನ್ನುವ ಬದಲು  ಜೈಹಿಂದ್ ಎನ್ನಬೇಕು' ಎಂದು ಆದೇಶಿಸಲಾಗಿದೆ.  
ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸಹಿ ಒಳಗೊಂಡ ಆದೇಶವನ್ನು ಹೊರಡಿಸಲಾಗಿದೆ. ಸೆಪ್ಟಂಬರ್ 2017ರಲ್ಲಿ ಸಾತ್ನಾ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪೈಲೆಟ್ ಆಧಾರದ ಮೇಲೆ ಶಿಕ್ಷಣ ಸಚಿವರು ಪರಿಚಯಿಸಿದ್ದರು. ಈಗ 7 ತಿಂಗಳ ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವನ್ನು ತುಂಬುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ದೀಪಕ್ ಜೋಷಿ ಸಮರ್ಥನೆ ನೀಡಿದ್ದಾರೆ.

Follow Us:
Download App:
  • android
  • ios