ರೈತರ ಆತ್ಮಹತ್ಯೆ ಸರಣಿ ಮುಂದುವರಿದಿರುವ ಬೆನ್ನಲ್ಲೇ, ಆರ್ಥಿಕ ಅಡಚಣೆಯಿಂದಾಗಿ ರೈತನೊಬ್ಬ ಇಬ್ಬರು ಹೆಣ್ಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ಘಟನೆ ನಡೆದಿದೆ. ಎತ್ತನ್ನು ಕೊಳ್ಳಲು ಹಣ ಇಲ್ಲದ ಕಾರಣ ರೈತನೊಬ್ಬ ಎತ್ತುಗಳ ಬದಲಿಗೆ ತನ್ನಿಬ್ಬರು ಹೆಣ್ಮಕ್ಕಳನ್ನು ಬಳಸಿಕೊಂಡು ಹೊಲ ಉಳುಮೆ ಮಾಡಿದ್ದಾನೆ.
ನವದೆಹಲಿ (ಜು. 09): ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿರುವ ಬೆನ್ನಲ್ಲೇ, ಆರ್ಥಿಕ ಅಡಚಣೆಯಿಂದಾಗಿ ರೈತನೊಬ್ಬ ಇಬ್ಬರು ಹೆಣ್ಮಕ್ಕಳನ್ನೇ ಬಳಸಿ ಹೊಲ ಉಳುಮೆ ಮಾಡಿದ ಘಟನೆ ನಡೆದಿದೆ.
ಎತ್ತನ್ನು ಕೊಳ್ಳಲು ಹಣ ಇಲ್ಲದ ಕಾರಣ ಸೆಹೋರ್ ಜಿಲ್ಲೆಯ ಬಸಂತ್’ಪುರ ಗ್ರಾಮದ ಸರ್ದಾರ್ ಕಾಹ್ಲಾ ಎಂಬ ರೈತ ಎತ್ತುಗಳ ಬದಲಿಗೆ ತನ್ನಿಬ್ಬರು ಹೆಣ್ಮಕ್ಕಳು- ರಾಧಿಕಾ (14) ಹಾಗೂ ಕುಂತಿ (11)- ಬಳಸಿಕೊಂಡು ಹೊಲ ಉಳುಮೆ ಮಾಡಿದ್ದಾನೆ.
ಎತ್ತು ಖರೀದಿಸುವಷ್ಟು ನನ್ನಲ್ಲಿ ಹಣವಿಲ್ಲ. ಆರ್ಥಿಕ ತೊಂದರೆಯಿಂದಾಗಿ ನನ್ನಿಬ್ಬರು ಮಕ್ಕಳು ಶಾಲೆಯನ್ನೇ ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎಂದು ಕಾಹ್ಲಾ ಹೇಳಿದ್ದಾನೆ.
ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸರ್ಕಾರಿ ಯೋಜನೆಯಡಿ ನೆರವು ಒದಗಿಸಲಾಗುವುದೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಲ ಉಳುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದೆಂದು ತನಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
(ಚಿತ್ರ: ಏಎನ್ಐ)
