ನಿಧಾನವಾಗಿ ಚುನಾವಣಾ ಕಾವು ಏರುತ್ತಿರುವ ರಾಜ್ಯದಲ್ಲಿ ಆಗ ಬಾರದ ಘಟನೆ ಆಗಿದೆ.  ಪ್ರಚಾರದ ನಿಮಿತ್ತ ರಾಜ್ಯದ ಪ್ರವಾಸ ಮಾಡುತ್ತಿದ್ದ ಮುಖ್ಯಮಂತ್ರಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಭೋಪಾಲ್[ಸೆ.3] ವಿಧಾನಸಭಾ ಚುನಾವಣೆಯ ಪ್ರಯುಕ್ತ ರಾಜ್ಯ ಪ್ರವಾಸ ಕೈಗೊಂಡಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಸಮೀಪ ಚುರ್ಹಾಟ್‌ ಎಂಬಲ್ಲಿ ಈ ಪ್ರಕರಣ ನಡೆದಿದೆ.

ಸಿಎಂ ಚೌಹಾಣ್‌ ಅವರು ಕಲ್ಲೆಸೆತದಲ್ಲಿ ಗಾಯಗೊಂಡಿಲ್ಲ. ಚುರ್ಹಾಟ್‌ ಕ್ಷೇತ್ರವು ರಾಜ್ಯ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಅಜಯ್‌ ಸಿಂಗ್‌ ಅವರ ಕ್ಷೇತ್ರವಾಗಿದೆ.ಸಿಎಂ ವಾಹನದ ಮೇಲೆ ಕಲ್ಲೆಸೆತ ನಡೆದಿರುವ ಚುರ್ಹಾಟ್‌ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ.

ಇದಾದ ನಂತರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಚೌಹಾಣ್, ಕಾಂಗ್ರೆಸ್ ಗೆ ನನ್ನ ರಕ್ತ ಬಸಿಯುವ ಮನಸೊದ್ದರೆ ಬಸಿಯಲಿ.. ಮೀ ರೀತಿ ಹಿಂದಿನಿಂದ ನಿಂತು ಕುತಂತ್ರ ಮಾಡುವ ಬದಲು ನೇರವಾಗಿ ನಿಂತು ಹೋರಾಡಲಿ ಎಂದು ಸವಾಲು ಹಾಕಿದ್ದಾರೆ.