ಕರ್ನಾಟಕ ರಾಜಕೀಯ ಪ್ರಹಸನಕ್ಕೆ ಇದೀಗ ಮತ್ತೋರ್ವ ಕೈ ಮುಖಂಡ ಪ್ರವೇಶ ಮಾಡುತ್ತಿದ್ದಾರೆ. ಅತೃಪ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಮನವೊಲಿಕೆಗೆ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಎಂಟ್ರಿ ಕೊಡಲಿದ್ದಾರೆ. 

ಬೆಂಗಳೂರು [ಜು.14] : ಅತೃಪ್ತ ಶಾಸಕರ ಮನವೊಲಿಸುವಲ್ಲಿ ರಾಜ್ಯ ಕಾಂಗ್ರೆಸ್‌ ಶಾಸಕರಲ್ಲಿ ಮೂಡಿರುವ ಸ್ಪಷ್ಟವಿಶ್ವಾಸದ ಬೆನ್ನಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಮತ್ತು ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಕೂಡ ಅತೃಪ್ತರ ಮನವೊಲಿಸುವ ಕಾರ್ಯಾಚರಣೆಗೆ ಇಳಿಯಲು ರಾಜ್ಯಕ್ಕೆ ಸೋಮವಾರ ಆಗಮಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಕಮಲ್‌ನಾಥ್‌ ಮತ್ತು ಗುಲಾಮ್‌ ನಬಿ ಆಜಾದ್‌ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅತೃಪ್ತರನ್ನು ಮನವೊಲಿಸರು ಕಳೆದ ಒಂದು ವಾರದಿಂದ ನಗರದಲ್ಲಿ ಬೀಡು ಬಿಟ್ಟಿದ್ದ ಗುಲಾಂ ನಬಿ ಆಜಾದ್‌ ಗುರುವಾರ ರಾತ್ರಿ ದೆಹಲಿಗೆ ತೆರಳಿದ್ದರು. 

ಇದೀಗ ಕುಮಾರಸ್ವಾಮಿ ಅವರ ವಿಶ್ವಾಸಮತ ಘೋಷಣೆ ಮತ್ತು ಒಬ್ಬ ಅತೃಪ್ತ ಶಾಸಕನ ಮನವೊಲಿಕೆ ಬಳಿಕ ಇತರೆ ಅತೃಪ್ತರ ಮನವೊಲಿಕೆಯ ಸ್ಪಷ್ಟವಿಶ್ವಾಸ ದೊರೆತ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ ನಿರ್ವಹಿಸಲು ಈ ಇಬ್ಬರೂ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.