ಭೋಪಾಲ್ :  ಮಧ್ಯ ಪ್ರದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.  

ಮುಖ್ಯಮಂತ್ರಿ ಶಿವರಾಜ್ ಸಿಂಗ್  ಚೌಹಾಣ್ ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಆಸ್ತಿ ಪಾಸ್ತಿ ಬಗೆಗಿನ ಮಾಹಿತಿ ಬಹಿರಂಗಗೊಳಿಸಿದ್ದಾರೆ.   2003ರಿಂದ ಅಧಿಕಾರದಲ್ಲಿ ಇದ್ದು ಅವರ ಬಳಿ ಯಾವುದೇ ರೀತಿಯ ಕಾರುಗಳಿಲ್ಲ. ಆದರೆ ಅವರ ಪತ್ನಿ  ಅಂಬಾಸಿಡರ್ ಕಾರಿನ ಒಡತಿಯಾಗಿರುವ ಬಗ್ಗೆ ತಿಳಿಯಪಡಿಸಿದ್ದಾರೆ.  

ರಾಜ್ಯದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಆಸ್ತಿ ಪಾಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. 

ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ಅವರ ಸಾಂಪ್ರದಾಯಿಕ ಕ್ಷೇತ್ರವಾದ ಬುಧನಿಯಿಂದ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧೆ ಮಾಡುತ್ತಿದ್ದಾರೆ. 

ಒಟ್ಟು ಶಿವರಾಜ್ ಸಿಂಗ್ ಚೌಹಾಣ್ ಬಳಿಯಲ್ಲಿ 6.35 ಕೋಟಿ ಮೊತ್ತದ ಆಸ್ತಿಯಿದೆ. ಇನ್ನು ಕೃಷಿ ಭೂಮಿ, ಗ್ರೀನ್ ಹೌಸ್ ಹೊಂದಿದ್ದಾರೆ. 

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಸಾಕಷ್ಟು ಪ್ರಮಾಣದಲ್ಲಿ ತಯಾರಿ ನಡೆಸುತ್ತಿದ್ದು ಈಗಾಗಲೇ 230 ಕ್ಷೇತ್ರಗಳಲ್ಲಿ 193 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.