Asianet Suvarna News Asianet Suvarna News

ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಜತೆ ಮಿಸ್ತ್ರಿ ಸಂದರ್ಶನ

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಮುಖ್ಯಸ್ಥ ಮಧುಸೂದನ್‌ ಮಿಸ್ತ್ರಿ ಅವರು ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿದರು.

Madhusudan Mistry grills Congress ticket aspirants

ಬೆಂಗಳೂರು : ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಮುಖ್ಯಸ್ಥ ಮಧುಸೂದನ್‌ ಮಿಸ್ತ್ರಿ ಅವರು ಕೆಪಿಸಿಸಿ ಕಚೇರಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿದರು.

ಟಿಕೆಟ್‌ ಆಕಾಂಕ್ಷಿಗಳ ಸಂದರ್ಶನ ಮಾಡಿದ ಮಿಸ್ತ್ರಿ, ಯಾವ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ, ಕ್ಷೇತ್ರದ ಮತದಾರರು ಎಷ್ಟು, ಹಾಲಿ ಇರುವ ಶಾಸಕರು ಯಾರು, ಜನಾಭಿಪ್ರಾಯ ಏನಿದೆ? ಕಾಂಗ್ರೆಸ್‌, ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು? ವಿರೋಧ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ನೀವು ಯಾವ ಅಸ್ತ್ರ ಬಳಸುತ್ತೀರಿ ಎಂಬಿ​ತ್ಯಾದಿ ಪ್ರಶ್ನೆ​ಗಳ ಮೂಲಕ ಆಕಾಂಕ್ಷಿ​ಗಳ ಕ್ಷೇತ್ರ ಜ್ಞಾನ​ವನ್ನು ಒರೆಗೆ ಹಚ್ಚಿ​ದರು ಎನ್ನ​ಲಾ​ಗಿ​ದೆ.

ಗುರು​ವಾ​ರ​ದಂದು ಸುಮಾರು 80 ಆಕಾಂಕ್ಷಿ​ಗಳ ಸಂದ​ರ್ಶ​ನ​ವನ್ನು ಮಿಸ್ತ್ರಿ ನಡೆ​ಸಿ​ದರು. ಅನಂತರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಟಿಕೆಟ್‌ ಆಕಾಂಕ್ಷಿಗಳ ಸಭೆ ಕರೆದಿದ್ದೆವು. ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಪರಿಶೀಲನೆ ನಡೆಸುತ್ತೇವೆ. ಬಳಿಕ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಯಾರಿಗೆ ಟಿಕೆಟ್‌ ಕೊಡಬೇಕು. ಯಾರಿಗೆ ಕೊಡಬಾರದು ಎಂಬುದರ ಕುರಿತು ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಟಿಕೆಟ್‌ ನೀಡಬೇಕಾಗುತ್ತದೆ. ಈ ಕುರಿತು ಪರಿಶೀಲನೆ ನಡೆಯುತ್ತಿದ್ದು, ಇಂದು ಸುಮಾರು 70ರಿಂದ 80 ಮಂದಿ ಆಕಾಂಕ್ಷಿಗಳನ್ನು ಸಂದರ್ಶಿಸಲಾಗಿದೆ. ಪ್ರಾಥಮಿಕ ಸಭೆಯಲ್ಲಿನ ವಿಚಾರಗಳನ್ನು ಕೇಂದ್ರ ಚುನಾವಣಾ ಸಮಿತಿ ಮುಂದಿಡಲಾಗುವುದು. ಒಬ್ಬರಿಗೆ ಒಂದೇ ಟಿಕೆಟ್‌ ಎಂಬ ವಿಚಾರದಲ್ಲಿ ಅರ್ಜಿ ಪಡೆಯಲಾಗುತ್ತಿದೆ ಎಂದರು.

Follow Us:
Download App:
  • android
  • ios