ಮುಂಬೈ : ಮಹಾರಾಷ್ಟ್ರ ಗೋವಾದಲ್ಲಿಯೂ ಕೂಡ ಕೇರಳ ರೀತಿಯ  ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಘಟ್ಟಗಳ ಪರಿಸರ ತಜ್ಞರಾದ  ಮಾದವ್ ಗಾಡ್ಗಿಲ್ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಪರಿಸರದ ಕಾಳಜಿ ವಹಿಸದಿದ್ದಲ್ಲಿ ಅಲ್ಲಿಗಿಂತಲೂ ಕೂಡ ಶೋಚನೀಯ ಸ್ಥಿತಿ ಎದುರಾಗಬಹುದು ಎಂದಿದ್ದಾರೆ. 

ಕೇರಳದಲ್ಲಿ ಉಂಟಾದ ಮಳೆ ಒಂದು ರೀತಿ ಆದರೆ, ಗೋವಾ ಹಾಗೂ ಮಹಾರಾಷ್ಟ್ರಗಳ ಸ್ಥಿತಿಯೇ ಬೇರೆಯಾಗಿದೆ. ಇಲ್ಲಿ ಕೇರಳದಲ್ಲಿ ಸುರಿದ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಕೂಡ, ಭೂ ಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗಾಡ್ಗಿಲ್  ಹೇಳಿದ್ದಾರೆ. 2014ರಲ್ಲಿ  ಪುಣೆ ಹಾಗೂ ಮಲಿನ್ ಪ್ರದೇಶದಲ್ಲಿ ಉಂಟಾದ ಸ್ಥಿತಿಗತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ನೀರಿನಿಂದಲೇ ಪ್ರವಾಹ ಸಂಭವಿಸುತ್ತದೇ ಎಂದೇ ಹೇಳಲಾಗದು. ಯಾವುದೇ ರೀತಿಯ ನೈಸರ್ಗಿಕ ವಿಪತ್ತೂ ಕೂಡ ಸಂಭವಿಸಬಹುದು. ಮಹಾರಾಷ್ಟ್ರ ಅನೇಕ ರೀತಿಯ ಪರಿಸರ ಸಂಬಂಧಿತ ಸಮಸ್ಯೆಗಳು ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ್ಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ ಎಂದು ಹೇಳಿದ್ದಾರೆ. 

ನದಿ ಪ್ರದೇಶಗಳ ಆಕ್ರಮಣ, ಕಾಡುಗಳ ನಾಶಗಳಂತವೇ ಇಂತಹ ದುಸ್ಥಿತಿಗೆ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ.