Asianet Suvarna News Asianet Suvarna News

ಚೀನಾ ಉದ್ಧಟತನಕ್ಕೆ ತಕ್ಕ ಪಾಠ: ಚೀನಾ ಪ್ರಾಡಕ್ಟ್ ಬ್ಯಾನ್ ಅಭಿಯಾನಕ್ಕೆ ವ್ಯಾಪಕ ಬೆಂಬಲ, ವಸ್ತುಗಳ ಮಾರಾಟ ಶೇ.60 ಕುಸಿತ

ಗಡಿಯಲ್ಲಿ ಈಗ ಚೀನಾ- ಭಾರತ ಸಂಬಂಧ ಹದಗೆಟ್ಟಿದೆ. ಗಡಿಯಲ್ಲಿ ಚೀನಾ ಉದ್ಧಟತನದಿಂದ ಯುದ್ಧೋನ್ಮಾದದ ಭೀತಿ ಕೂಡ ಆವರಿಸಿದೆ. ಹೀಗಾಗಿ ಚೀನಾಗೆ ಬುದ್ಧಿ ಕಲಿಸಬೇಂಕೆೆಂದು ಚೀನಾ ವಸ್ತುಗಳನ್ನು ಖರೀದಿಸದಂತೆ ಹಲವು ದಿನಗಳಿಂದ ಆನ್'ಲೈನ್ ಅಭಿಯಾನ ಶುರುಗೊಂಡಿದ್ದು ಅಭೂತಪೂರ್ವ ಯಶಸ್ಸು  ಕಂಡಿದೆ. ಇದರಿಂದಾಗಿ ಚೀನಾ ವಸ್ತುಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.

Made In China Products Ban In India

ನವದೆಹಲಿ(ಜು.10): ಗಡಿಯಲ್ಲಿ ಈಗ ಚೀನಾ- ಭಾರತ ಸಂಬಂಧ ಹದಗೆಟ್ಟಿದೆ. ಗಡಿಯಲ್ಲಿ ಚೀನಾ ಉದ್ಧಟತನದಿಂದ ಯುದ್ಧೋನ್ಮಾದದ ಭೀತಿ ಕೂಡ ಆವರಿಸಿದೆ. ಹೀಗಾಗಿ ಚೀನಾಗೆ ಬುದ್ಧಿ ಕಲಿಸಬೇಂಕೆೆಂದು ಚೀನಾ ವಸ್ತುಗಳನ್ನು ಖರೀದಿಸದಂತೆ ಹಲವು ದಿನಗಳಿಂದ ಆನ್'ಲೈನ್ ಅಭಿಯಾನ ಶುರುಗೊಂಡಿದ್ದು ಅಭೂತಪೂರ್ವ ಯಶಸ್ಸು  ಕಂಡಿದೆ. ಇದರಿಂದಾಗಿ ಚೀನಾ ವಸ್ತುಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ.

ದೇಶದೆಲ್ಲೆಡೆ ಚೀನಾ ಪ್ರಾಡಕ್ಟ್ ಬಹಿಷ್ಕಾರ ಅಭಿಯಾನ

ಗಡಿಯಲ್ಲಿ ಖ್ಯಾತೆ ತೆಗೆದಿರುವ ಚೀನಾಗೆ ತಕ್ಕ ಪಾಠ ಕಲಿಸಬೇಕೆಂದು ಇಡೀ ಭಾರತದಾದ್ಯಂತ ಒಗ್ಗಟ್ಟಿನ ಹೋರಾಟ ಶುರುವಾಗಿದೆ. ಚೀನಾ ನಿರ್ಮಿತ ವಸ್ತುಗಳನ್ನು ಖರೀದಿಸದಂತೆ ದೇಶದೆಲ್ಲೆಡೆ ಆನ್ ಲೈನ್ ಅಭಿಯಾನ ಶುರುವಾಗಿದ್ದು  ಭರ್ಜರಿ ಯಶಸ್ಸು ಗಳಿಸಿದೆ. ಈ ಅಭಿಯಾನದಿಂದಾಗಿ ಭಾರತದಲ್ಲಿ ಚೀನಾ ವಸ್ತುಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಪ್ರತಿವರ್ಷ ಭಾರತದಲ್ಲಿ ಚೀನಾ ವಹಿವಾಟು  4 ಲಕ್ಷ ಕೋಟಿ!: ಚೀನಾದಲ್ಲಿ ಭಾರತ ವಹಿವಾಟು ಕೇವಲ 50 ಸಾವಿರ ಕೋಟಿ!

ಭಾರತದಲ್ಲಿ ಪ್ರತಿ ವರ್ಷ ಚೀನಾದ ಉತ್ಪನ್ನಗಳ ಮಾರಾಟದ ವಹಿವಾಟು ಸರಿ ಸುಮಾರು 4 ಲಕ್ಷ ಕೋಟಿಗೂ ಹೆಚ್ಚು ಆಗುತ್ತದೆ. ಆದ್ರೆ ಚೀನಾದಲ್ಲಿ ಮಾತ್ರ ಭಾರತದ ಉತ್ಪನ್ನಗಳ ವಹಿವಾಟು ಕೇವಲ 50 ಸಾವಿರ ಕೋಟಿ. ಇಡೀ ವಿಶ್ವದಲ್ಲಿ ಚೀನಾದ ಹೆಚ್ಚು ಉತ್ಪನ್ನ ಭಾರತದಲ್ಲಿ ಮಾರಾಟವಾಗುತ್ತವೆ. ಚೀನಾ ಭಾರತದ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದ್ದರೂ ಗಡಿಯಲ್ಲಿ ಹಾಗಾಗಾ ಉದ್ಧಟತನ ತೋರಿಸುತ್ತಲೇ ಇರುತ್ತೆ. ಹೀಗಾಗಿ ಚೀನಾದ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು ಚೀನವಾ ಪ್ರಾಡಕ್ಟ್ ಬಹಿಷ್ಕರಿಸುವ ಹೋರಾಟ ಶುರುವಾಗಿದೆ.

ಭಾರತದಲ್ಲಿ ಚೀನಾ ವಸ್ತುಗಳ ಮಾರಾಟ  ಶೇ.60 ಕುಸಿತ

ಈಗಾಗಲೇ ಚೀನಾದ ಉತ್ಪನ್ನಗಳಿಗೆ ಭಾರತದಲ್ಲಿ ಶೇ.60ರಷ್ಟು ಬೇಡಿಕೆ ಕುಸಿದಿದೆ. ಚೀನಾ ನಿರ್ಮಿತ ಲಾಟೀನುಗಳು, ಗಾಜಿನ ದೀಪಗಳು, ಲ್ಯಾಂಪ್ ಗಳು  ಹಾಗೂ ತೂಗು ದೀಪಗಳು ಗ್ರಾಹಕರ ಬೇಡಿಕೆ ಇಲ್ಲದೇ ಅಂಗಡಿಗಳಲ್ಲಿ ಹಾಗೆಯೇ ಉಳಿದುಕೊಳ್ಳುತ್ತಿವೆ ಎಂಬುದು ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಇದಲ್ಲದೆ ಚೀನಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ವಿದ್ಯುನ್ಮಾನ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಇಲ್ಲದಂತಾಗಿದೆ.

ಭಾರತದ ಬೆನ್ನಿಗೆ ಚೂರಿ ಹಾಕುತ್ತಿರುವ ಚೀನಾ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಕೂಡ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಚೀನಾದ ಉತ್ಪನ್ನಗಳನ್ನು ದೇಶದ ಹಿತದೃಷ್ಟಿಯಿಂದ ಬಹಿಷ್ಕರಿಸಿ ಎಂದು ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ ಆ್ಯಪ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ    ಸಂದೇಶ  ಹರಡುತ್ತಿದೆ.  ವಿಹಿಂಪ ಜತೆಗೆ ಬಜರಂಗ ದಳ, ಧರ್ಮ ಜಾಗರಣ ಮಂಚ್‌, ದುರ್ಗಾವಾಹಿನಿ, ಗೋವು ಸೇವಾ ದಳ ಮೊದಲಾದ ಬಲಪಂಥೀಯ ಸಂಘಟನೆಗಳೂ ಕೈಜೋಡಿಸಿವೆ.

ಒಟ್ಟಿನಲ್ಲಿ ದೇಶದ ತುಂಬ ಆ್ಯಂಟಿ ಮೇಡ್ ಇನ್ ಚೀನಾ ವಸ್ತುಗಳ ವಿರುದ್ಧ ಜಾಗೃತಿ ಜೋರಾಗಿದ್ದು, ಮೇಡ್ ಇನ್ ಇಂಡಿಯಾ  ಕೂಗು ಕೇಳಿ ಬರುತ್ತಿದೆ. ಒಂದು ವೇಳೆ ಚೀನಾದ ಎಲ್ಲಾ ಪ್ರಾಡಕ್ಟ್ ಗಳನ್ನು ಬಹಿಷ್ಕರಿಸಿದ್ದೇ ಆದ್ರೆ ಚೀನಾ ಆರ್ಥಿಕತೆಗೆ ಭಾರೀ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ.

 

Follow Us:
Download App:
  • android
  • ios