‘ಇಂದು ಬ್ರಾಹ್ಮಣ ಸಮುದಾಯದಲ್ಲಿ ಹುಡುಗಿಯರು ವೇದ ಪಂಡಿತರು, ಅರ್ಚಕರನ್ನು ಮದುವೆಯಾಗಲು ಇಷ್ಟಪಡಲ್ಲರೀ.. ಅವರಿಗೇನಿದ್ದರೂ ಸಾಫ್ಟ್‌ವೇರ್ ಎಂಜಿನಿಯರ್, ಅಮೆರಿಕ, ಲಂಡನ್ನಲ್ಲಿರುವ ಡಾಕ್ಟರೇ ಬೇಕು ಎಂದು ಹೇಳ್ತಾರಂತೆ’ ಎಂದು ವೈವಾಹಿಕ ಕೇಂದ್ರಗಳಲ್ಲಿ ಕೇಳಿಬರುವ ಸಾಮಾನ್ಯ ಮಾತು.

ಹೈದರಾಬಾದ್: ‘ಇಂದು ಬ್ರಾಹ್ಮಣ ಸಮುದಾಯದಲ್ಲಿ ಹುಡುಗಿಯರು ವೇದ ಪಂಡಿತರು, ಅರ್ಚಕರನ್ನು ಮದುವೆಯಾಗಲು ಇಷ್ಟಪಡಲ್ಲರೀ.. ಅವರಿಗೇನಿದ್ದರೂ ಸಾಫ್ಟ್‌ವೇರ್ ಎಂಜಿನಿಯರ್, ಅಮೆರಿಕ, ಲಂಡನ್ನಲ್ಲಿರುವ ಡಾಕ್ಟರೇ ಬೇಕು ಎಂದು ಹೇಳ್ತಾರಂತೆ’ ಎಂದು ವೈವಾಹಿಕ ಕೇಂದ್ರಗಳಲ್ಲಿ ಕೇಳಿಬರುವ ಸಾಮಾನ್ಯ ಮಾತು. ಇದನ್ನು ಮನಗಂಡಿರುವ ತೆಲಂಗಾಣದ ಕೆ. ಚಂದ್ರಶೇಖರರಾವ್ ಅವರು ಈಗ ವಿಶಿಷ್ಟ ಆಫರ್ ಪ್ರಕಟಿಸಿದ್ದಾರೆ.

ಬ್ರಾಹ್ಮಣ ವೇದ ಪಂಡಿತರು/ಅರ್ಚಕರನ್ನು ಮದುವೆಯಾಗುವ ಕನ್ಯೆಯರಿಗೆ 3 ಲಕ್ಷ ರು. ಇನಾಮು ನೀಡುವುದಾಗಿ ಘೋಷಿಸಲಾಗಿದೆ. ವರನು ಬ್ರಾಹ್ಮಣ ಅರ್ಚಕನಾಗಿದ್ದರೆ, ಸರ್ಕಾರವು ಮದುವೆಯಾಗುವ ಜೋಡಿಯ ಹೆಸರಿನಲ್ಲಿ ಜಂಟಿ ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಖಾತೆ ತೆಗೆದು 3 ಲಕ್ಷ ರು. ನೀಡಲಿದೆ. ಇದರ ಜತೆಗೆ ಈ ಜೋಡಿಯ ಮದುವೆಗೆ 1 ಲಕ್ಷ ರು. ನೀಡಲಾಗುವುದು. ಎಫ್‌ಡಿ ಇಡಲಾಗಿರುವ ಠೇವಣಿಯು 3 ವರ್ಷದ್ದಾಗಿದ್ದು, ಆ ಬಳಿಕವಷ್ಟೇ ಜೋಡಿಯು ಹಣ ಹಿಂತೆಗೆಯಬಹುದಾಗಿದೆ.