ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರಾ ಎಂ ಬಿ ಪಾಟೀಲ್? ರೈತರಿಗೆ ಬೋರ್’ವೆಲ್ ಆಮೀಷ ಒಡ್ಡಿದ್ರಾ ಸಚಿವರು?

M B Patil Violate the Code of Conduct
Highlights

ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.  ಎಂ ಬಿ ಪಾಟೀಲ್ ಅವರ  ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ್ ಅವರು  ಮಾಧ್ಯಮದ ಎದುರು ಪ್ರದರ್ಶನ ಮಾಡಿದ್ದಾರೆ. 

ವಿಜಯಪುರ (ಏ. 06):  ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.  ಎಂ ಬಿ ಪಾಟೀಲ್ ಅವರ  ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ್ ಅವರು  ಮಾಧ್ಯಮದ ಎದುರು ಪ್ರದರ್ಶನ ಮಾಡಿದ್ದಾರೆ. 

ಎಂ ಬಿ ಪಾಟೀಲ್  ಅವರು  ಬಬಲೇಶ್ವರ  ಮತಕ್ಷೇತ್ರದಲ್ಲಿ 140 ಕ್ಕೂ ಹೆಚ್ಚು ಬೋರ್’ವೆಲ್’ಗಳನ್ನು ಕೊರೆಯಿಸಿ ರೈತರಿಗೆ ಆಮೀಷ ಒಡ್ಡಿದ್ದಾರೆ.  ಬಬಲೇಶ್ವರ ಕ್ಷೇತ್ರದಲ್ಲಿ ಸಾವಿರಾರು ಬೈಕ್ ಗಳಿಗೆ ಎಂ ಬಿ ಪಾಟೀಲ್ ಭಾವಚಿತ್ರ ಇರುವ ಬಾವುಟ ಅಳವಡಿಕೆ ಮಾಡಲಾಗಿದೆ.  ಬಬಲೇಶ್ವರ ಮತಕ್ಷೇತ್ರದ ಜನರಿಗೆ  ಉಚಿತ ಶ್ರೀಶೈಲ ಯಾತ್ರೆ ಆಮೀಷವನ್ನೂ ಒಡ್ಡಿದ್ದಾರೆ.  ಬಿಎಲ್ ಡಿಇ ಸಂಸ್ಥೆಯ 45 ಕ್ಕೂ ಹೆಚ್ಚು ಕೆಲಸಗಾರರನ್ನು ನಿಯಮ ಉಲ್ಲಂಘಿಸಿ ಚುನಾವಣಾ ಸೇವೆಗೆ ನಿಯೋಜನೆ ಮಾಡಿದ್ದಾರೆ. ಬಬಲೇಶ್ವರ ಮತದಾರರಿಗೆ ಬ್ಯಾಗ್ ಛತ್ರಿ ಟಿ-ಶರ್ಟ್ ಹಣ ಹಂಚಿಕೆ  ಮಾಡಿದ್ದಾರೆ.  ಈ ಎಲ್ಲ ಉಲ್ಲಂಘನೆ ಬಗ್ಗೆ ಡಿಸಿ, ಚುನಾವಣಾಧಿಕಾರಿಗೆ ದೂರು ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ.  ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ.  ಸ್ವತಃ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಮಗದೊಮ್ಮೆ ದೂರು ನೀಡಲಾಗುವುದು ಎಂದು ವಿಜುಗೌಡ ಪಾಟೀಲ್  ಹೇಳಿದ್ದಾರೆ. 

 

loader