ಕಾನೂನಿನ ನೆಪವೊಡ್ಡಿ ಸುವರ್ಣ ನ್ಯೂಸ್ ಚರ್ಚೆಗೆ ಹೆಂಡತಿ, ಮಗನನ್ನು ಕಳುಹಿಸದೇ ದೂರ ಉಳಿದ ಎಂ ಬಿ ಪಾಟೀಲ್

First Published 28, Mar 2018, 11:38 AM IST
M B Patil Explanation to Suvarna News
Highlights

ಸಚಿವ ಎಂ.ಬಿ ಪಾಟೀಲ್ ಕುಟುಂಬದ ವಿದೇಶಿ ಹೂಡಿಕೆ ಎಕ್ಸ್’ಕ್ಲೂಸಿವ್  ಮಾಹಿತಿಯನ್ನು  ಸುವರ್ಣ ನ್ಯೂಸ್  ಬಯಲಿಗೆಳೆದಿತ್ತು. ಇದರ ಬಗ್ಗೆ  ಚರ್ಚೆಗೆ ಮಗ ಹಾಗೂ ಹೆಂಡತಿಯನ್ನು ಸುವರ್ಣ ನ್ಯೂಸ್ ಸ್ಟುಡಿಯೋಗೆ ಕಳುಹಿಸುತ್ತೇನೆಂದು ಖುದ್ದು ಎಂ ಬಿ ಪಾಟೀಲರೇ ಲೈವ್’ನಲ್ಲಿ ಹೇಳಿದ್ದರು. ಆದರೆ ತಾವು ಹೇಳಿದ ಹಾಗೆ ಹೆಂಡತಿ, ಮಗನನ್ನು ಕಳುಹಿಸದೇ ತಪ್ಪಿಸಿಕೊಂಡಿದ್ದರು. 

ತುಮಕೂರು (ಮಾ. 28):  ಸಚಿವ ಎಂ.ಬಿ ಪಾಟೀಲ್ ಕುಟುಂಬದ ವಿದೇಶಿ ಹೂಡಿಕೆ ಎಕ್ಸ್’ಕ್ಲೂಸಿವ್  ಮಾಹಿತಿಯನ್ನು  ಸುವರ್ಣ ನ್ಯೂಸ್  ಬಯಲಿಗೆಳೆದಿತ್ತು. ಇದರ ಬಗ್ಗೆ  ಚರ್ಚೆಗೆ ಮಗ ಹಾಗೂ ಹೆಂಡತಿಯನ್ನು ಸುವರ್ಣ ನ್ಯೂಸ್ ಸ್ಟುಡಿಯೋಗೆ ಕಳುಹಿಸುತ್ತೇನೆಂದು ಖುದ್ದು ಎಂ ಬಿ ಪಾಟೀಲರೇ ಲೈವ್’ನಲ್ಲಿ ಹೇಳಿದ್ದರು. ಆದರೆ ತಾವು ಹೇಳಿದ ಹಾಗೆ ಹೆಂಡತಿ, ಮಗನನ್ನು ಕಳುಹಿಸದೇ ತಪ್ಪಿಸಿಕೊಂಡಿದ್ದರು. 

 ಕಾನೂನು ತೊಡಕಿನಿಂದಾಗಿ ಚರ್ಚೆ‌ಗೆ ಕಳುಹಿಸಿಲ್ಲ. ಸುವರ್ಣ ನ್ಯೂಸ್ ವಿರುದ್ದ ಕೇಸ್ ದಾಖಲಿಸುತ್ತಿದ್ದೇನೆ. ಹೀಗಾಗಿ ಚರ್ಚೆಗೆ  ಕಳುಹಿಸಲು ಸಾಧ್ಯವಾಗಲ್ಲ. ನಮ್ಮ ವಕೀಲರು ಚರ್ಚೆಗೆ ಕಳುಹಿಸಬೇಡಿ ಎಂದು ಸೂಚನೆ ನೀಡಿದ್ದಾರೆ. ಕೇಸ್ ದಾಖಲಿಸಿ ಚರ್ಚೆಗೆ ಹೋದರೆ ಕಾನೂನಿನ ತೊಡಕುಂಟಾಗುತ್ತದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ. 

loader