ರಾಂಚಿ: ‘ಜನರು ಒಂದು ವೇಳೆ ಗೋಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗುಂಪು ಥಳಿತ ಅಪರಾಧ ನಿಯಂತ್ರಿಸಬಹುದು’ ಎಂದು ಹಿಂದೂ ಜಾಗರಣ ಮಂಚ್‌ನ ಕಾರ್ಯ ಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ. 

ಜಾರ್ಖಂಡ್ ನಲ್ಲಿ ಹಿಂದೂ ಧರ್ಮದ ವಿರುದ್ಧ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಗ್ನಿವೇಶ್ ಮೇಲೆ ಬಿಜೆಪಿ ಯುವಕರ ಗುಂಪು ನಡೆಸಿದ ಹಲ್ಲೆ ಬಗ್ಗೆ ಮಾತನಾಡಿದ ಅವರು, ‘ಗೋಹತ್ಯೆ ಧರ್ಮಕ್ಕೆ ವಿರುದ್ಧ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮತ್ತೊಬ್ಬರ ಭಾವನೆಗೆ ನೋವುಂಟು ಮಾಡಬಾ ರದು. ಧಾರ್ಮಿಕ ನಂಬಿಕೆ ಬಗ್ಗೆ ನೋವುಂಟು ಮಾಡುವು ದರ ವಿರುದ್ಧ ಗಟ್ಟಿ ಕಾನೂನು ತರಬೇಕು’ ಎಂದರು.