ಕೇಶವ್ ಕ್ಲಾಕ್ರ್ಸ್ ಇನ್ ಹೊಟೆಲ್, ಮೂರಂತಸ್ತಿನ ಹೈಫೈ ಹೋಟೆಲ್. ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಇದು ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಟಿತ ಹೋಟೆಲ್. ಆದರೆ ಇಲ್ಲಿ ಜೊತೆಗೆ ಹೋಟೆಲ್ ಮಾಲೀಕರಾದ ವಿಕಾಸ್ ಹಾಗೂ ಯೋಗೇಶ್ ಕಟ್ಟಡ ನಿರ್ಮಾಣದಲ್ಲಿ ನಿಯಮ ಗಾಳಿಗೆ ತೂರಿದ್ದಾರೆ. ಜೊತೆಗೆ ಹೋಟೆಲ್ ಮುಂದಿರುವ 2 ಸಾವಿರ ಚದರಡಿ ಸರ್ವಿಸ್ ರಸ್ತೆಯನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಎಚ್ಚೆತ್ತ ಗದಗ-ಬೆಟಗೇರಿ ನಗರಸಭೆ ಅತಿಕ್ರಮ ತೆರವು ಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಿದೆ.
ಈಗ ರಾಜ್ಯಾದ್ಯಂತ ಅತಿಕ್ರಮಣ ತೆರವಿನದ್ದೇ ಸುದ್ದಿ. ರಾಜಧಾನಿ ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದರೆ, ಇಲ್ಲೊಂದು ಐಶಾರಾಮಿ ಹೊಟೆಲ್ ಸರ್ವೀಸ್ ರಸ್ತೆಯನ್ನೇ ಅತಿಕ್ರಮಣ ಮಾಡಿದೆ. ಅದೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ರಸ್ತೆಯನ್ನು. ಈ ಅಕ್ರಮ ಕುರಿತ ವಿಚಾರವನ್ನೀಗ ಮಾಧ್ಯಮಗಳು ಬಯಲಿಗೆಳೆದಿದ್ದು, ಕೊನೆಗೂ ನಗರಸಭೆ ಎಚ್ಚೆತ್ತು, ಐಶಾರಾಮಿ ತ್ರಿ ಸ್ಟಾರ್ ಹೊಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಅದೇನು ನೋಟಿಸ್ ಅಂತಿರಾ? ಇಲ್ಲದೆ ವಿವರ.
ಕೇಶವ್ ಕ್ಲಾಕ್ರ್ಸ್ ಇನ್ ಹೊಟೆಲ್, ಮೂರಂತಸ್ತಿನ ಹೈಫೈ ಹೋಟೆಲ್. ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಇದು ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಪ್ರತಿಷ್ಟಿತ ಹೋಟೆಲ್. ಆದರೆ ಇಲ್ಲಿ ಜೊತೆಗೆ ಹೋಟೆಲ್ ಮಾಲೀಕರಾದ ವಿಕಾಸ್ ಹಾಗೂ ಯೋಗೇಶ್ ಕಟ್ಟಡ ನಿರ್ಮಾಣದಲ್ಲಿ ನಿಯಮ ಗಾಳಿಗೆ ತೂರಿದ್ದಾರೆ. ಜೊತೆಗೆ ಹೋಟೆಲ್ ಮುಂದಿರುವ 2 ಸಾವಿರ ಚದರಡಿ ಸರ್ವಿಸ್ ರಸ್ತೆಯನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಎಚ್ಚೆತ್ತ ಗದಗ-ಬೆಟಗೇರಿ ನಗರಸಭೆ ಅತಿಕ್ರಮ ತೆರವು ಗೊಳಿಸುವಂತೆ ಮಾಲೀಕರಿಗೆ ನೋಟಿಸ್ ನೀಡಿದೆ.
ನಗರಸಭೆ ಕೇವಲ ನೋಟಿಸ್ ನೀಡಿ ಸುಮ್ಮನೆ ಕುಳಿತುಕೊಂಡರೆ ಆಗುವುದಿಲ್ಲ. ಕೇಶವ್ ಕ್ಲಾಕ್ರ್ಸ ಇನ್ ಹೊಟೆಲ್ ಅತಿಕ್ರಮಿಸಿಕೊಂಡಿರುವ ಸರ್ವಿಸ್ ರಸ್ತೆಯನ್ನು ವಶಕ್ಕೆ ಪಡೆಯಲೇಬೇಕು ಎನ್ನುವುದು ಸ್ಥಳೀಯರ ಆಗ್ರಹ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಜಾಗಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನಗರಸಭೆ ತನ್ನ ಜಮೀನು ಬಗ್ಗೆ ಈ ರೀತಿ ಖಡಕ್ ನಿರ್ಧಾರ ತೆಗೆದುಕೊಂಡ್ರೆ ಮತ್ತೆ ಯಾರು ಒತ್ತುವರಿ ಕೆಲಸಕ್ಕೆ ಮುಂದಾಗಲ್ಲ. ಅದ್ಹಾಗೇ ಇದು ಸವರ್ಣ ನ್ಯೂಸ್ ಇಂಪ್ಯಾಕ್ಟ್