ಲತಾ ಹಾಡಿದ್ದ ಹಾಡು ಚಿತ್ರದ ಕಾಮದಾಟಕ್ಕೆ ಬಳಸಿದ ಕರಣ್‌

Lust Stories: Is Lata Mangeshkar's family miffed with Karan Johar over use song for masturbation scene
Highlights

ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಕಬಿ ಖುಷಿ ಕಬಿ ಗಮ್‌ ಸಿನಿಮಾಕ್ಕಾಗಿ ಹಾಡಿದ್ದ ಗೀತೆಯೊಂದನ್ನು ಹೆಸರಾಂತ ಚಿತ್ರ ನಿರ್ದೇಶಕ ಕರಣ್‌ ಜೋಹರ್‌ ಅವರು ಕಿರುಚಿತ್ರವೊಂದರ ರಾಸಲೀಲೆ ದೃಶ್ಯಕ್ಕೆ ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಲತಾ ಮಂಗೇಶ್ಕರ್‌ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮುಂಬೈ: ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಕಬಿ ಖುಷಿ ಕಬಿ ಗಮ್‌ ಸಿನಿಮಾಕ್ಕಾಗಿ ಹಾಡಿದ್ದ ಗೀತೆಯೊಂದನ್ನು ಹೆಸರಾಂತ ಚಿತ್ರ ನಿರ್ದೇಶಕ ಕರಣ್‌ ಜೋಹರ್‌ ಅವರು ಕಿರುಚಿತ್ರವೊಂದರ ರಾಸಲೀಲೆ ದೃಶ್ಯಕ್ಕೆ ಬಳಸಿ ಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಲತಾ ಮಂಗೇಶ್ಕರ್‌ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಲತಾ ಮಂಗೇಶ್ಕರ್‌ ಅವರು ಹಾಡಿದ್ದ ಹಾಡೊಂದನ್ನು ಈ ರೀತಿ ವಿರೂಪಗೊಳಿಸುವುದನ್ನು ಅವರು ಈ ವಯಸ್ಸಿನಲ್ಲಿ ನೋಡಲು ಇಷ್ಟಪಡುವುದಿಲ್ಲ. ಕರಣ್‌ ಜೋಹರ್‌ ಅವರು ಬೇರೆ ಹಾಡನ್ನು ಕಾಮದೃಶ್ಯಕ್ಕೆ ಬಳಸಬಹುದಿತ್ತು. ಇಂತಹ ಮುಜುಗರ ಸೃಷ್ಟಿಸಬೇಕಿರಲಿಲ್ಲ ಎಂದು ಕುಟುಂಬ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಣ್‌ ಜೋಹರ್‌ ಅವರು ಲಸ್ಟ್‌ ಸ್ಟೋರೀಸ್‌ ಎಂಬ ಕಿರುಚಿತ್ರವೊಂದನ್ನು ಹೊರತಂದಿದ್ದಾರೆ. ಅಲ್ಲಿ ನವವಿವಾಹಿತೆಯೊಬ್ಬಳು ತನ್ನ ಕಾಮದಾಸೆಯನ್ನು ಕೈಗಳ ಮೂಲಕ ತೀರಿಸಿಕೊಳ್ಳುವ ದೃಶ್ಯಕ್ಕೆ ಲತಾ ಅವರು ಹಾಡಿದ್ದ ಹಾಡನ್ನು ಬಳಸಿಕೊಂಡಿರುವುದು ಈ ವಿವಾದಕ್ಕೆ ಕಾರಣ.

loader