ನಾಳೆ ಸಂಭವಿಸಲಿದೆ ಖಗ್ರಾಸ ಚಂದ್ರಗ್ರಹಣ : ಏನಿದರ ವಿಶೇಷತೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 11:34 AM IST
Lunar Eclipse 2018 Timing In India
Highlights

ಈ ಶತಮಾನದ ಅತಿ ಸುದೀರ್ಘ ಖಗ್ರಾಸ್ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಶುಕ್ರವಾರ ಗುರುಪೂರ್ಣಿಮೆಯದಿನ ತಡರಾತ್ರಿ  11.55 ಕ್ಕೆ ಆರಂಭವಾಗಲಿರುವ ಗ್ರಹಣ ಶನಿವಾರ ನಸುಕಿನ ಜಾವ 3.50ಕ್ಕೆ ಅಂತ್ಯಗೊಳ್ಳಲಿದೆ. 

ನವದೆಹಲಿ: ಈ ಶತಮಾನದ ಅತಿ ಸುದೀರ್ಘ ಖಗ್ರಾಸ್ ಚಂದ್ರಗ್ರಹಣ ಶುಕ್ರವಾರ ಮಧ್ಯರಾತ್ರಿ ಸಂಭವಿಸಲಿದೆ. ಶುಕ್ರವಾರ ಗುರುಪೂರ್ಣಿ ಮೆಯದಿನ ತಡರಾತ್ರಿ  11.55 ಕ್ಕೆ ಆರಂಭವಾಗಲಿರುವ ಗ್ರಹಣ ಶನಿವಾರ ನಸುಕಿನ ಜಾವ 3.50ಕ್ಕೆ ಅಂತ್ಯಗೊಳ್ಳಲಿದೆ. 

ಸರಿಯಾಗಿ 3 .55 ತಾಸು ಸಂಭವಿಸಲಿರುವ ಗ್ರಹಣ ಇದಾಗಲಿದೆ. ಖಗ್ರಾಸ್ ಚಂದ್ರಗ್ರಹಣಕ್ಕೆ ‘ಬ್ಲಡ್ ಮೂನ್’ ಎಂದೂ ಕರೆಯಲಾಗುತ್ತಿದ್ದು, 1 ಗಂಟೆಯಿಂದ 2.43ರವರೆಗೆ ಚಂದ್ರ ಹೆಚ್ಚೂ ಕಡಿಮೆ ಮರೆಯಾಗಲಿದ್ದು, ಕಡುಗೆಂಪಾಗಿ ಕಾಣಲಿದ್ದಾನೆ. 

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ರಹಣ ಸಂಪೂರ್ಣವಾಗಿರಲಿದ್ದು, ಖಗೋಳಶಾಸ್ತ್ರ ಆಸಕ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಆಸ್ತಿಕರು ಪೂಜೆ-ಪುನಸ್ಕಾರ, ಗ್ರಹಣ ಶಾಂತಿಗಳಲ್ಲಿ ತೊಡಗಿಕೊಳ್ಳಲಿದ್ದಾರೆ. 

ಬರಿಗಣ್ಣನ ನೋಟಕ್ಕಿಲ್ಲ ತೊಂದರೆ: ಬರಿಗಣ್ಣಲ್ಲಿ ಗ್ರಹಣ ನೋಡಿದರೆ ಏನೂ ತೊಂದರೆ ಆಗದು ಎಂದು ಇದೇ ವೇಳೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮುಂದಿನ ಖಗ್ರಾಸ್ ಗ್ರಹಣ: ಭಾರತದಲ್ಲಿ ಮುಂದಿನ ಸಂಪೂರ್ಣ ಚಂದ್ರಗ್ರಹಣ 2028  ರ ಡಿ.31 ರಂದು ಸಂಭವಿಸಲಿದೆ.

loader