ವಿವಾದಕ್ಕೆ ಎಡೆಯಾಯ್ತು ವಿಶ್ವವಿದ್ಯಾಲಯದ ಪ್ರಶ್ನೆ ಪತ್ರಿಕೆ ..!

First Published 20, Mar 2018, 2:08 PM IST
Lucknow varsity Exam Questions on Modi Govt schemes spark row
Highlights

ಲಕ್ನೋ ವಿಶ್ವವಿದ್ಯಾಲಯದ ಬಿ ಕಾಂ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ತೀವ್ರ ವಿವಾದಕ್ಕೆ ಎಡೆ ಮಾಡಿದೆ. ಅದರಲ್ಲಿ ಮೋದಿ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ  ಪ್ರಶ್ನೆ ಕೇಳಲಾಗಿದೆ.  

ಲಕ್ನೋ : ಲಕ್ನೋ ವಿಶ್ವವಿದ್ಯಾಲಯದ ಬಿ ಕಾಂ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ತೀವ್ರ ವಿವಾದಕ್ಕೆ ಎಡೆ ಮಾಡಿದೆ. ಅದರಲ್ಲಿ ಮೋದಿ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ  ಪ್ರಶ್ನೆ ಕೇಳಲಾಗಿದೆ.  

ಈ ಸಂಬಂಧ ವಿಶ್ವವಿದ್ಯಾಲಯದ ಎಡ ಪಂಥೀಯ ಸಂಘಟನೆ ವಿದ್ಯಾರ್ಥಿಗಳು ಈ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡಿದ ವಿಶ್ವವಿದ್ಯಾಲಯದ ಮಂಡಳಿ ವಿರುದ್ಧ ಪ್ರತಿಭಟನೆಯನ್ನು ನಡೆಸಿವೆ. ಇದೀಗ  ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಕುಲಪತಿ  ಎಸ್’ಪಿ ಸಿಂಗ್ ಅವರು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ವಾರ್ಷಿಕ ಪರೀಕ್ಷೆಯಲ್ಲಿ ನಡೆದ  ಪ್ರಶ್ನೆ ಪತ್ರಿಕೆ ವಿವಾದ ಸಾಕಷ್ಟು ಚರ್ಚೆಗೂ ಕೂಡ ಕಾರಣವಾಗಿದೆ. ಅಲ್ಲದೇ ಪ್ರಮುಖ ಯೋಜನೆಗಳ ಬಗ್ಗೆ ವಿವರಣೆಯನ್ನು ಕೂಡ ಕೇಳಲಾಗಿದೆ.

loader