Asianet Suvarna News Asianet Suvarna News

ಪೊಲೀಸ್ ಪೇದೆ ತಂದೆಗೆ ಮಗನೇ ಬಾಸ್ ಆದರೆ...!

ಉತ್ತರ ಪ್ರದೇಶದ ಲಕ್ನೋದಲ್ಲಿ ಪೇದೆಯಾಗಿರುವ ತಂದೆಗೆ ಮಗನೇ ಬಾಸ್ ಆಗಿ ನೇಮಕವಾಗಿರುವ ಅಪರೂಪದ ಘಟನೆ ನಡೆದಿದೆ. 

Lucknow police constables son appointed as his boss
Author
Bengaluru, First Published Oct 29, 2018, 3:43 PM IST
  • Facebook
  • Twitter
  • Whatsapp

ಲಕ್ನೋ :  ಉತ್ತರ ಪ್ರದೇಶದ ಪೊಲೀಸ್ ಪೇದೆಯೋರ್ವರು ಹೆಮ್ಮೆ ಪಡುವಂತಹ ಕ್ಷಣವೊಂದು ಎದುರಾಯ್ತು.  ಪೇದೆ ಜನಾರ್ದನ್ ಸಿಂಗ್  ಅವರ ಪುತ್ರ ಅನೂಪ್ ಕುಮಾರ್ ಸಿಂಗ್  ಲಕ್ನೋ ಎಸ್ ಪಿಯಾಗಿ ಆಯ್ಕೆಯಾಗಿದ್ದಾರೆ.

ಮಗನ ಕೈ ಕೆಳಗೆ ತಂದೆ ಇದೀಗ ಕೆಲಸ ಮಾಡುತ್ತಿದ್ದಾರೆ. ತಂದೆ ಕಾರ್ಯನಿರ್ವಹಿಸುವ ವಿಭೂತಿ ಪ್ರದೇಶಕ್ಕೆ ಮಗನೂ ಕೂಡ ಪೋಸ್ಟಿಂಗ್ ಮಾಡಿಸಿಕೊಂಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನೂಪ್ ಪ್ರತಿಯೊಬ್ಬರೂ ಕೂಡ ಖಾಸಗಿ ಹಾಗೂ ವೃತ್ತೀಯ ಜೀವನವನ್ನು ಹೊಂದಿರುತ್ತಾರೆ. ನಮ್ಮ ಹುದ್ದೆಗೆ ತಕ್ಕಂತೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. 

ಇನ್ನು ತಂದೆ ಜನಾರ್ದನ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು ನನ್ನ ಸೀನಿಯರ್ ಆಗಿ ನನ್ನ ಮಗ ಬಂದಿರುವುದು ನನಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios