ಬುರ್ಖಾ ನಂತರ ವೇಲ್ ತೆಗೀರಿ ಅಂದ್ರು.. ಮೆಟ್ರೋದಲ್ಲಿ ಇದೆಂಥ ಪ್ರಕರಣ!

ಮೆಟ್ರೋ ನಿಲ್ದಾಣದಲ್ಲಿ ಪುರುಷ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಕ್ನೋದ ಮೆಟ್ರೋದಲ್ಲಿ ಸೋಮವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದೆ.

Lucknow Metro Security Guards Ask Burqa-clad Women to Take Off Veil

ಲಕ್ನೋ[ಮೇ. 29] ಲಕ್ನೋ ಮೆಟ್ರೋ ರೈಲು ನಿಲ್ದಾಣದ ಸಿಬ್ಬಂದಿ ಬುರ್ಖಾ ಧರಿಸಿ ಓಡಾಡುತ್ತಿದ್ದ 6 ಮಂದಿಯನ್ನು ತಪಾಸಣೆಗೆ ಗುರಿ ಮಾಡಿದ್ದಾರೆ.  ಮಾವಯ್ಯ ನಿಲ್ದಾಣದಲ್ಲಿ ತಪಾಸಣೆ ನಡೆಸಲು ಮುಂದಾದ ಪುರುಷ ಸಿಬ್ಬಂದಿ ಬುರ್ಖಾ ಧರಿಸಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸೋಮವಾರ ನಡೆದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಅಲಾಂಭಾಗ್ ದ ನಿವಾಸಿ ಮಾಜ್ ಮೊಹಮದ್ ತನ್ನ ಸಂಬಂಧಿಕರೊಂದಿಗೆ ತೆರಳುತ್ತಿದ್ದರು. ಈ ವೇಳೆ ತಪಾಸಣೆ ನಡೆಸಬೇಕಿದ್ದ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. 

ಮರ್ಮಾಂಗ ತೋರಿಸಿದ ಕಾಮುಕ, ವಿಡಿಯೋ ಮಾಡಿ ಚಳಿ ಬಿಡಿಸಿದ ಯುವತಿ!

ಲಕ್ನೋ ಮೆಟ್ರೋದ ಎಂಡಿಗೆ ದೂರು ದಾಖಲಾಗಿದ್ದು,  ನಾನು ಮಾವಯ್ಯ ಸ್ಟೇಶನ್ ನಿಂದ ಅಲಾಂಭಗ್ ನಿಲ್ದಾಣಕ್ಕೆ ನನ್ನ 5 ಜನ ಸಂಬಂಧಿಕರೊಂದಿಗತೆ ತೆರಳುತ್ತಿದ್ದೆ. ನನ್ನನ್ನು ಸೇರಿಸಿ 6 ಜನರಿಗೆ  ಟಿಕೆಟ್ ಪಡೆದುಕೊಂಡಿದ್ದೆ. ಚೆಕಿಂಗ್ ಪಾಯಿಂಟ್ ಹತ್ತಿರ ತೆರಳಿದಾಗ,  ಪರಿಶೀಲನೆ ಮಾಡಲು ಮುಂದಾದ ಪುರುಷ ಸಿಬ್ಬಂದಿ ಮೊದಲಿಗೆ ಬುರ್ಖಾ ತೆಗೆಯಲು ಹೇಳಿದ್ದಾರೆ. ನನ್ನನ್ನು ಸೇರಿಸಿ ಎಲ್ಲರೂ ಬುರ್ಖಾ ತೆಗೆಯುತ್ತೇವೆ ಆದರೆ ಮಹಿಳೆಯರಿಗೆ ಮೀಸಲಿರುವ ಕ್ಯಾಬಿನ್ ನಲ್ಲಿ ತೆಗೆಯುತ್ತೇವೆ ಎಂದೇವು.  ಈ ವೇಳೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾರೆ ಎಂದು ದೂರು ನೀಡಿರುವ ಮಹಿಳೆ ಆರೋಪಿಸಿದ್ದಾರೆ.

ಇದಾದ ಮೇಲೆ ಟಿಕೆಟ್ ವಾಪಸ್ ಮಾಡಲು ಹೋದಾಗಲೂ ಸ್ಪಂದನೆ ಸಿಕ್ಕಿಲ್ಲ ಎಂದು ಮಹಿಳೆ  ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ಮೆಟ್ರೋ ತನಿಖೆ ನಡೆಯುತ್ತಿದ್ದು ತಪ್ಪೆಸಗಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

Latest Videos
Follow Us:
Download App:
  • android
  • ios